Publish Date: Sat, 10 Nov 2018 (06:58 IST)
Updated Date: Sat, 10 Nov 2018 (07:00 IST)
ಒಡಿಶಾ : ಮಹಿಳೆಯೊಬ್ಬಳು ಯುವಕನೊಬ್ಬನಿಗೆ ಮದ್ಯಪಾನ ಮಾಡಿಸಿ ಆತ ಪ್ರಜ್ಞೆ ತಪ್ಪಿದಾಗ ಆತನ ಮರ್ಮಾಂಗವನ್ನು ಕತ್ತರಿಸಿದ ಘಟನೆ ಒಡಿಶಾದ ಕೆಯೊಂಜ್ಹಾರ ಜಿಲ್ಲೆಯ ಹರಿಚಂದನ್ ಪುರ್ ಪ್ರದೇಶದಲ್ಲಿ ನಡೆದಿದೆ.
ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಂಜೆ ಮನೆಗೆ ಬರುತ್ತಿದ್ದ ವೇಳೆ ಕತ್ತಲಾದ್ದರಿಂದ ಹರಿಚಂದನ್ ಪುರದಲ್ಲಿರೋ ಮಹಿಳೆಯೊಬ್ಬಳ ಮನೆಯಲ್ಲಿ ತಂಗಿದ್ದಾನೆ. ಆ ವೇಳೆ ಆತ ಬೇರೆಯವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದು, ಇದನ್ನು ಆಕೆ ಖಂಡಿಸಿದ್ದಾಳೆ. ಈ ವಿಚಾರಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ.
ನಂತರ ರಾತ್ರಿ ಮಹಿಳೆ ಆತನಿಗೆ ಒತ್ತಾಯಪೂರ್ವಕವಾಗಿ ಮದ್ಯಪಾನ ಮಾಡಿಸಿದ್ದಾಳೆ. ಅತಿಯಾಗಿ ಮದ್ಯ ಸೇವಿಸಿ ಯುವಕ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಮಹಿಳೆ ಯುವಕನ ಮರ್ಮಾಂಗವನ್ನು ಕಟ್ ಮಾಡಿದ್ದಾಳೆ ಎಂಬುದಾಗಿ ಯುವಕ ಆರೋಪಿಸಿದ್ದಾನೆ.
ಸದ್ಯ ಯುವಕ ಹರಿಚಂದನ್ ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ ಅಂತ ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.