ಸರ್ಕಾರ್ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಮಿಳುನಾಡಿನ ಸರ್ಕಾರ ವಾರ್ನಿಂಗ್ ಮಾಡಿದ್ಯಾಕೆ?

ಗುರುವಾರ, 8 ನವೆಂಬರ್ 2018 (09:59 IST)
ಚೆನ್ನೈ : ತಮಿಳಿನ ಸ್ಟಾರ್ ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರದ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ತಮಿಳುನಾಡಿನ ಸರ್ಕಾರ ವಾರ್ನ್ ಮಾಡಿದೆ.

ನಟ ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು, ಜನರಿಂದ ಬಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಆದರೆ ತಮಿಳುನಾಡು ಸರಕಾರವು ಮತದಾರರಿಗೆ ನೀಡುವ ಮಿಕ್ಸಿ, ಗ್ರೈಂಡರ್​, ಟೀವಿ ಸೇರಿದಂತೆ  ಉಚಿತ ಉಡುಗೊರೆಗಳನ್ನು ಜನರು ಎಸೆಯುವ ದೃಶ್ಯಗಳು ಸಿನಿಮಾದ ಒರುವಿರಲ್​ ಪುರಚಿ ಎನ್ನುವ ಹಾಡಿನಲ್ಲಿದ್ದು, ನಿರ್ದೇಶಕರು ಆ ಸೀನ್ಅನ್ನು ತೆಗೆದುಹಾಕಬೇಕೆಂದು ತಮಿಳುನಾಡಿನ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವ ಕಡಂಬೂರ್​ ಸಿ ರಾಜು ಅವರು ಒತ್ತಾಯಿಸಿದ್ದಾರೆ.

 

ನಿರ್ದೇಶಕರು ಈ ದೃಶ್ಯಗಳಿಗೆ ಕತ್ತರಿ ಹಾಕದಿದ್ದರೆ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕಲಾನಿಧಿ ಮಾರನ್​ ಅವರು ಈ ಸಿನಿಮಾದ ನಿರ್ಮಾಪಕರಾಗಿರುವುದರಿಂದ ಇದರ ಹಿಂದೆ ರಾಜಕೀಯ ಉದ್ದೇಶಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿಗೆ ಶುಭಕೋರಿದ ದಿಶಾ ಪಟಾನಿ ಮೇಲೆ ಗರಂ ಆದ ಅಭಿಮಾನಿಗಳು