Publish Date: Wed, 22 Apr 2026 (11:02 IST)
Updated Date: Wed, 22 Apr 2026 (11:05 IST)
ಸುಶಿಕ್ಷಿತರಂತೆ ತೋರುವ ಮಹಿಳೆಯೊಬ್ಬರು ಕಾರಿನಲ್ಲೇ ಮೂತ್ರ ಮಾಡಿದ್ದು ಸಿಟ್ಟಿಗೆದ್ದ ಕ್ಯಾಬ್ ಚಾಲಕ ಹಿಗ್ಗಾಮುಗ್ಗಾ ಬೈದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕ್ಯಾಬ್ ಚಾಲಕರು ಹಲವು ಅನೂಹ್ಯ ಘಟನೆಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಗ್ರಾಹಕರು ಕಿತ್ತಾಡುವುದು, ಭಾಷೆಗಾಗಿ ಜಗಳವಾಡುವುದು, ಬುಕ್ ಮಾಡಿ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡುವುದು ಇತ್ಯಾದಿ ಸಾಮಾನ್ಯ. ಆದರೆ ಇಲ್ಲಿ ನಡೆದ ಘಟನೆ ಮಾತ್ರ ವಿಚಿತ್ರವಾಗಿದೆ.
ನೀಟ್ ಆಗಿ ಡ್ರೆಸ್ ಮಾಡಿಕೊಂಡು ಸುಶಿಕ್ಷಿತಳಂತೆ ಕಾಣುವ ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿರುತ್ತಾರೆ. ಆದರೆ ಕ್ಯಾಬ್ ನಲ್ಲಿ ಕುಳಿತ ಮಹಿಳೆ ಪ್ರಯಾಣದ ವೇಳೆ ಕಾರಿನೊಳಗೇ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಆಕೆ ಕೂತ ಸೀಟ್ ಕೆಳಗೆ ಎಲ್ಲಾ ಒದ್ದೆಯಾಗಿದ್ದನ್ನು ಚಾಲಕ ಗಮನಿಸಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಆತ ವಾಚಮಗೋಚರವಾಗಿ ಬೈದಿದ್ದಲ್ಲದೆ ನೀನೇ ಕ್ಲೀನ್ ಮಾಡಿಕೊಡಬೇಕು ಎಂದು ಮಹಿಳೆಗೆ ಆವಾಜ್ ಹಾಕಿದ್ದಾನೆ. ಮಹಿಳೆ ಆತನ ಜೊತೆಗೆ ವಾದಕ್ಕಿಳಿದಿದ್ದರೂ ನಾನೇ ಕ್ಲೀನ್ ಮಾಡಿಸಿಕೊಡುವುದಾಗಿ ಹೇಳಿದ್ದಾಳೆ. ಆದರೆ ಆಕೆಯ ವರ್ತನೆ ಮಾತ್ರ ವಿಚಿತ್ರವಾಗಿದ್ದು, ನೆಟ್ಟಿಗರು ಆಕೆಗೆ ಯಾವುದಾದರೂ ವೈದ್ಯಕೀಯ ಸಮಸ್ಯೆ ಇರಬಹುದು. ಇದಕ್ಕೇ ಮೂತ್ರಿಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ