Select Your Language

Notifications

webdunia
webdunia
webdunia
webdunia

ಸರ್ಪವನ್ನು ಚುಂಬಿಸೋದೇನು, ಬಾಯಿಯೊಳಗಿಟ್ಟುಕೊಳ್ಳೋದೇನು.. ಅಬ್ಬಾ ಈತನ ಹಾವಿನ ಸರಸ ನೋಡಿ Video

Viral video of snake
Photo Credit: X
ಹಾವು ಕಂಡರೆ ಮಾರು ದೂರ ಓಡುವವರ ನಡುವೆ ಈ ವ್ಯಕ್ತಿ ಹಾವನ್ನು ಬರಿಗೈಯಲ್ಲಿ ಹಿಡಿದು ಬಾಯಿಯೊಳಗಿಟ್ಟು ಸರಸವಾಡುವುದನ್ನು ನೋಡಿ ಮೈ ಜುಮ್ ಎನಿಸುತ್ತದೆ.

ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರಿಗೆ ಹಾವು ಹಿಡಿಯುವುದು ಪ್ರವೃತ್ತಿಯಾದರೆ ಮತ್ತೆ ಕೆಲವರಿಗೆ ಅದು ಪರಿಸರದ ಮೇಲಿನ ಕಾಳಜಿ. ಇನ್ನು, ಕೆಲವರು ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಹುಚ್ಚಿಗಾಗಿ ಹಾವಿನ ಜೊತೆ ಸರಸವಾಡುತ್ತಾರೆ.

ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಹಾವು ಹಿಡಿಯುವ ವೇಳೆ ಅದರ ಜೊತೆ ದುಸ್ಸಾಹಸವನ್ನೇ ಮಾಡಿದ್ದಾನೆ. ರಸ್ತೆ ಬದಿಯಲ್ಲಿದ್ದ ಹಾವನ್ನು ಬರಿಗೈಯಲ್ಲಿ ಹಿಡಿಯುವ ಆತ ಬಳಿಕ ಅದರ ಜೊತೆ ಮಾತನಾಡುತ್ತಾ ನೇರವಾಗಿ ಅದರ ಬಾಯಿಗೆ ಬಾಯಿಯಿಡುತ್ತಾನೆ.

ಬಳಿಕ ಅದರ ಬಾಯಿಯನ್ನು ಬಾಯಿಗಿಟ್ಟುಕೊಂಡು ಪೋಸ್ ಕೊಡುತ್ತಾನೆ. ಸುತ್ತಲಿದ್ದ ಜನ ಬೆರಗಾಗಿ ನೋಡುತ್ತಿರುವಾಗಲೇ ಹಾವನ್ನು ಕೈಯಲ್ಲಿ ಹಿಡಿದು ಚೀಲದೊಳಗೆ ತುಂಬುತ್ತಾನೆ. ಈತ ಹಾವು ಹಿಡಿಯುವ ವೈಖರಿಯ ವಿಡಿಯೋ ಇಲ್ಲಿದೆ ನೋಡಿ.

pic.twitter.com/4bcMoL1mlV

 

— Dinesh Kumar (@DineshRedBull) April 19, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಉಷ್ಣಗಾಳಿ ಜೊತೆಗೆ ಈ ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆ