Select Your Language

Notifications

webdunia
webdunia
webdunia
webdunia

ಮಲ್ಲಿಕಾರ್ಜುನ ಖರ್ಗೆ ಬಳಸಿದ ಭಾಷೆ ಬಗ್ಗೆ ಅಸಹ್ಯವಾಗುತ್ತದೆ: ಡಾ ಸಿಎನ್ ಅಶ್ವತ್ಥ ನಾರಾಯಣ

Dr CN AshwathNarayan
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಖರ್ಗೆ ಅವರದು ಕೀಳು ಮಟ್ಟದ ಹೇಳಿಕೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. 

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ಇರುವವರು, ಹಿರಿತನ ಹೊಂದಿರುವವರು ಬಳಸುವ ಭಾಷೆ
ನೋಡಿದರೆ ಅಸಹ್ಯವಾಗುತ್ತದೆ. ಭಾರತೀಯರಿಗೆ ಇದು ಅವಮಾನ ಎಂದರು. 
 
ಖರ್ಗೆ ಅವರು ಇಷ್ಟು ಕೀಳುಮಟ್ಟದ ಹೇಳಿಕೆ ನೀಡಬಾರದು. ಈ ಹಿಂದೆಯೂ ಖರ್ಗೆ ಅವರು ಮೋದಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುವುದು ನಂತರ ವಿಷಾಧ ವ್ಯಕ್ತಪಡಿಸುವುದು. ಅವರ ಅನುಭವಕ್ಕೆ ಸರಿಯಲ್ಲ. ಇಂತಹುದನ್ನು ಎಲ್ಲ ಭಾರತೀಯರು ಸಹಿಸಿಕೊಳ್ಳುವುದಿಲ್ಲ ಎಂದರು. ಕಾಂಗ್ರೆಸ್‍ಗೆ ದೇಶದ ಜನ ಮುಂದೆ ಸರಿಯಾದ ಪಾಠ ಕಲಿಸಲಿದ್ದಾರೆ. ಪಕ್ಷಕ್ಕೆ ಬಹಿಷ್ಕಾರ ಹಾಕುವ ದಿನ ದೂರವಿಲ್ಲ ಎಂದು ಹೇಳಿದರು. 
 
ದಲಿತರು, ಬಡವರು, ಮಹಿಳೆಯರು, ಯುವಕರು ಹೀಗೆ ಸಮಾಜದ ಎಲ್ಲ ವರ್ಗದ ಜನರ ಏಳಿಗೆಗಾಗಿ ದುಡಿಯುವ ಮಹಾನ್ ನಾಯಕ ಮೋದಿ ಅವರು. ಆದರೆ ಇದನ್ನು ತಿಳಿಯದೇ ಖರ್ಗೆ ಅವರು ಮಾತನಾಡುತ್ತಾರೆ. ಅವರಿಗೆ ಏನು ಸಮಸ್ಯೆ ಇದೆಯೋ, ಯಾರನ್ನು ಓಲೈಸಲು ಹೀಗೆ ಮಾತನಾಡುತ್ತಾರೋ, ಮುಂದೆ ಯಾವ ಸ್ಥಾನ ಪಡೆಯಲು ಹೀಗೆ ಆಡುತ್ತಾರೋ ಗೊತ್ತಿಲ್ಲ ಎಂದರು.  
 
 
ಹಿಂದಿಗೆ ಗ್ರೇಡಿಂಗ್ ಬದಲು ಅಂಕ ನೀಡಬೇಕು ಎಂಬ ವಿಷಯದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ ಅವರು, ಮಕ್ಕಳ ಶಿಕ್ಷಣದ ಬಗ್ಗೆ ಅರ್ಥ ಮಾಡಿಕೊಳ್ಳದ ಸರ್ಕಾರ ಇದು. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಶಿಕ್ಷಣವನ್ನು ಸರ್ಕಾರ ಹೀಗೆ ಹಗುರವಾಗಿ ಪರಿಗಣಿಸಿರುವುದು ಇದೇ ಮೊದಲಲ್ಲ. ಏನು ಮಾಡಿದರೂ ನಡೆಯುತ್ತದೆ ಎಂದುಕೊಂಡಿದೆ. ಯಾವುದೇ ನೀತಿಯನ್ನು ಸರಿಯಾಗಿ ಅನುಷ್ಠಾನ ಮಾಡದ ಸರ್ಕಾರ ಇನ್ನಾದರೂ ವಿದ್ಯಾರ್ಥಿಗಳ ಹಿತ ಕಾಪಾಡಲಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ವಿರುದ್ಧ ಹೇಳಿಕೆ ನೀಡಿದ ಖರ್ಗೆ ದೇಶದ ಕ್ಷಮೆ ಯಾಚಿಸಲಿ: ಎನ್.ರವಿಕುಮಾರ್ ಆಗ್ರಹ