Publish Date: Mon, 16 Nov 2020 (09:42 IST)
Updated Date: Mon, 16 Nov 2020 (09:44 IST)
ಜೈಪುರ: ತನ್ನಿಂದ ಶೀಳ ಕಳೆದುಕೊಂಡ ಮಹಿಳೆಯನ್ನು ದೀಪಾವಳಿಯ ದಿನದಂದೇ ಪಾಪಿಯೊಬ್ಬ ಜೀವಂತ ದಹನ ಮಾಡಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಮಹಿಳೆ ಈತನ ವಿರುದ್ಧ ಮಾನಭಂಗ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಇದೀಗ ದೀಪಾವಳಿ ದಿನ ಮಹಿಳೆ ಲಕ್ಷ್ಮೀ ಪೂಜೆ ಮಾಡುತ್ತಿರುವಾಗ ಆಕೆಯ ಮೇಲೆ ಪೆಟ್ರೋಲ್ ಸುರಿದ ಆರೋಪಿ ಜೀವಂತ ದಹನ ಮಾಡಿದ್ದಾನೆ. ಇದೀಗ ತೀವ್ರ ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಎಫ್ಐಆರ್ ದಾಖಲಿಸಿರುವ ಪೊಲೀಸರು ಇನ್ನಷ್ಟೇ ಆರೋಪಿಯನ್ನು ಬಂಧಿಸಬೇಕಿದೆ.