Publish Date: Sun, 15 Nov 2020 (09:50 IST)
Updated Date: Sun, 15 Nov 2020 (09:51 IST)
ಹೈದರಾಬಾದ್: ಅಕ್ರಮ ಸಂಬಂಧವಿದೆಯೆಂದು ಸಂಶಯಿಸಿ ಪ್ರೀತಿಸುತ್ತಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
37 ವರ್ಷದ ಮಹಿಳೆ ಮೃತಪಟ್ಟಾಕೆ. ಈಕೆಯ ಪತಿ ತುಂಬಾ ವರ್ಷಗಳ ಹಿಂದೆಯೇ ತೀರಿಕೊಂಡಿದ್ದ. ಇದೀಗ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ ಆಕೆ ತನ್ನ ಬಿಟ್ಟು ಇನ್ನೊಬ್ಬ ಪುರುಷನ ಸಂಗ ಮಾಡಿದ್ದಾಳೆಂದು ಅನುಮಾನಿಸಿದ ಆರೋಪಿ ಮದ್ಯ ಸೇವನೆ ಮಾಡಿಸಿ ಬ್ಲೇಡ್ ನಿಂದ ಕುತ್ತಿಗೆ ಕುಯ್ದಿದ್ದಲ್ಲದೆ, ಬಳಿಕ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.