ನವದೆಹಲಿ: ಆನ್ ಲೈನ್ ಮ್ಯಾಚಿಂಗ್ ಸೈಟ್ ಗಳನ್ನು ನೋಡಿ ಶ್ರೀಮಂತ ಮಧ್ಯಮ ವರ್ಗದ ವರನನನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈ ಮಹಿಳೆ ಎಂಥಾ ಖತರ್ನಾಕ್ ಕೆಲಸ ಮಾಡುತ್ತಿದ್ದಳು ಎಂದು ಗೊತ್ತಾದರೆ ಬೆಚ್ಚಿಬೀಳುತ್ತೀರಿ.
ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಒಂದೇ ವೈವಾಹಿಕ ಅಂಕಣದಲ್ಲಿ ಹೆಸರು ನೊಂದಾಯಿಸಿ ಎಂಟು ಮಂದಿ ವೃದ್ಧರನ್ನು ಮದುವೆಯಾಗಿದ್ದು, ಪ್ರತೀ ಬಾರಿ ಮದುವೆಯಾದ ಬಳಿಕವೂ ಕೆಲವು ದಿನ ಅವರ ಜತೆ ಇರುವ ನಾಟಕವಾಡಿ ಕೊನೆಗೆ ಅವರ ಬಳಿಯಿದ್ದ ನಗ-ನಗದು ದೋಚಿ ಪರಾರಿಯಾಗುತ್ತಿದ್ದಳು. ಆದರೆ ಈ ಬಾರಿ ಆಕೆ ಮದುವೆಯಾದ 60 ವರ್ಷದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರಿಂದ ಆಕೆಯ ಬಣ್ಣ ಬಯಲಾಗಿದೆ. ವೃದ್ಧನಿಂದ 15 ಲಕ್ಷ ದೋಚಿದ್ದ ಖತರ್ನಾಕ್ ಮಹಿಳೆ ಈಗ ಕಂಬಿ ಎಣಿಸುತ್ತಿದ್ದಾಳೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!