Publish Date: Fri, 04 Sep 2020 (10:22 IST)
Updated Date: Fri, 04 Sep 2020 (10:23 IST)
ಇಂಧೋರ್: ಮೂಢನಂಬಿಕೆ ಯಾವ ಮಟ್ಟಿಗಿರುತ್ತದೆ ಎಂದರೆ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ತಾನು ನಂಬಿದ ದೇವರನ್ನು ಸಂತೃಪ್ತಗೊಳಿಸಲು ಪತ್ನಿಯನ್ನೇ ಬಲಿ ಕೊಟ್ಟ ಹೀನ ಘಟನೆ ನಡೆದಿದೆ.
50 ವರ್ಷದ ವ್ಯಕ್ತಿಯೊಬ್ಬ ಮೂಢನಂಬಿಕೆಗೆ ಕಟ್ಟುಬಿದ್ದು ಪತ್ನಿಯನ್ನು ಹತ್ಯೆ ಮಾಡಿರುವುದಲ್ಲದೆ, ಆಕೆಯ ರುಂಡವನ್ನು ಮನೆಯ ದೇವರ ಮನೆಯಲ್ಲಿ ಹೂತಿಟ್ಟು ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ದಂಪತಿಯ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದು, ತಂದೆ ಮೂಢನಂಬಿಕೆಯಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ. ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.