Select Your Language

Notifications

webdunia
webdunia
webdunia
webdunia

ಪುರುಷತ್ವವಿಲ್ಲದ ಗಂಡ: ಅತ್ತೆ-ಮಾವನಿಂದ ಮಹಿಳೆಗೆ ಕಿರುಕುಳ

ಪುರುಷತ್ವವಿಲ್ಲದ ಗಂಡ: ಅತ್ತೆ-ಮಾವನಿಂದ ಮಹಿಳೆಗೆ ಕಿರುಕುಳ
ಇಂಧೋರ್ , ಶುಕ್ರವಾರ, 27 ಮೇ 2022 (09:10 IST)
ಇಂಧೋರ್: ಗಂಡನಿಗೆ ಲೈಂಗಿಕವಾಗಿ ಅಸಮರ್ಥ ಎಂದು ತಿಳಿದ ಮಹಿಳೆ ಅತ್ತೆ ಮಾವನಿಗೆ ವಿಷಯ ತಿಳಿಸಿದ್ದಕ್ಕೆ ಅವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾರೆ.

ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೇ ಫೆಬ್ರವರಿಯಲ್ಲಿ  ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ವೇಳೆ ತವರು ಮನೆಯಿಂದ ಗಂಡನಿಗೆ 5 ಲಕ್ಷ ರೂ. ವರದಕ್ಷಿಣೆ ನೀಡಲಾಗಿತ್ತು.

ಹನಿಮೂನ್ ಗೆ ಹೋಗಿದ್ದಾಗ ಆತ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ್ದ. ಆಗಲೇ ಆತ ಲೈಂಗಿಕವಾಗಿ ಅಸಮರ್ಥ ಎಂದು ಗೊತ್ತಾಗಿದ್ದು. ಮನೆಗೆ ವಾಪಸ್ ಆದ ಮೇಲೆ ಅತ್ತೆ-ಮಾವನಿಗೆ ಈ ವಿಚಾರ ತಿಳಿಸಿದ ಮೇಲೆ ಅವರು ದೈಹಿಕವಾಗಿ ಹಿಂಸೆ ನೀಡಿದ್ದಲ್ಲದೆ, ಇನ್ನೂ 10 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ಕೊಟ್ಟು ಮನೆಯಿಂದ ಹೊರ ಹಾಕಿದ್ದಾರೆ. ಬಳಿಕ ಇದೀಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನನ್ನೆ ಕೊಲೆ ಮಾಡಿಸಿದ !