Select Your Language

Notifications

webdunia
webdunia
webdunia
webdunia

ಯುವತಿಯ ಅತ್ಯಾಚಾರ ನಾಟಕಕ್ಕೆ ಪೊಲೀಸರೇ ಬೇಸ್ತು!

ಅತ್ಯಾಚಾರ
ನಾಗ್ಪುರ , ಬುಧವಾರ, 15 ಡಿಸೆಂಬರ್ 2021 (09:44 IST)
ನಾಗ್ಪುರ: ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ಸುಳ್ಳು ದೂರು ನೀಡಿ ಯುವತಿಯೊಬ್ಬಳು ಆಟವಾಡಿಸಿದ ಘಟನೆ ನಡೆದಿದೆ.

ಸೋಮವಾರ ಬೆಳಿಗ್ಗೆ ಯುವತಿ ಕಲಾಮ್ನಾ ಪೊಲೀಸ್ ಠಾಣೆಯ ಪೊಲೀಸರಿಗೆ ಯುವತಿ ಅತ್ಯಾಚಾರ ದೂರು ನೀಡಿದ್ದಳು. ನಾಗ್ಪುರದ ನಿರ್ಜನ ಪ್ರದೇಶವೊಂದರಲ್ಲಿ ಅತ್ಯಾಚಾರ ನಡೆದಿದೆ ಎಂದಿದ್ದಳು.

ಆಕೆಯ ಅಳಲು ಕೇಳಿ ಪೊಲೀಸರು ಗಂಭೀರವಾಗಿ ಪ್ರಕರಣವನ್ನು ಪರಿಗಣಿಸಿ ದಿನವಿಡೀ ಹುಡುಕಾಟ ನಡೆಸಿದ್ದರು. ಸುಮಾರು 250 ಸಿಸಿಟಿವಿ ಪರಿಶೀಲಿಸಿದರೂ ಆಕೆ ಹೇಳಿದ್ದಕ್ಕೆ ಸಾಕ್ಷ್ಯ ಸಿಗಲಿಲ್ಲ. ಕೊನೆಗೆ ಆಕೆಯನ್ನೇ ವಿಚಾರಣೆಗೊಳಪಡಿಸಿದಾಗ ಪ್ರಿಯಕರನನ್ನು ಮದುವೆಯಾಗಲು ಈ ರೀತಿ ನಾಟಕವಾಡಿದೆ ಎಂದಿದ್ದಾಳೆ. ಇದೀಗ ಆಕೆಯ ‘ಅತ್ಯಾಚಾರದ ನಾಟಕ’ದ ಹಿಂದಿನ ರಹಸ್ಯ ತಿಳಿಯಲು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಫೋಟಕ ವರದಿ ಬಿಚ್ಚಿಟ್ಟ ಸಿದ್ದರಾಮಯ್ಯ!