Select Your Language

Notifications

webdunia
webdunia
webdunia
webdunia

ಗಂಡನಿಗೆ ತಲಾಖ್ ಕೊಟ್ಟು ಅಳಿಯನೊಂದಿಗೆ ಓಡಿ ಹೋದಳು!

ಗಂಡನಿಗೆ ತಲಾಖ್ ಕೊಟ್ಟು ಅಳಿಯನೊಂದಿಗೆ ಓಡಿ ಹೋದಳು!
ಹರ್ಯಾಣ , ಭಾನುವಾರ, 19 ಆಗಸ್ಟ್ 2018 (09:12 IST)
ಹರ್ಯಾಣ: ದೇಶದಲ್ಲಿ ಮುಸ್ಲಿಂ ಮಹಿಳೆಯರು ಗಂಡಂದಿರ ಶೋಷಣೆಯಿಂದ ಪಾರಾಗಲು ತ್ರಿವಳಿ
ತಲಾಖ್ ನಿಷೇಧ ಮಾಡಬೇಕು ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಇಲ್ಲೊಬ್ಬಳು ಪತ್ನಿಯೇ ಪತಿಗೆ ತಲಾಖ್ ನೀಡಿದ ಘಟನೆ ನಡೆದಿದೆ.
 

ಹರ್ಯಾಣದ ಯಮುನಾನಗರ್ ನಿವಾಸಿ ಶಾಜಿಯಾ ಎಂಬ ಮಹಿಳೆ ತನ್ನ ಗಂಡನಿಗೆ ಚೀಟಿಯಲ್ಲಿ ತಲಾಖ್ ಎಂದು ಮೂರು ಬಾರಿ ಬರೆದು ಸಂಬಂಧದಲ್ಲಿ ಅಳಿಯನಾಗುವ, ತನ್ನ ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ಇದೇ ತಲಾಖ್ ಮೂಲಕ ಅದೆಷ್ಟೋ ವರ್ಷಗಳಿಂದ ವಿಚ್ಛೇದನ ನೀಡಿ ಅನ್ಯಾಯ ಮಾಡುತ್ತಿದ್ದಾರೆ ಎಂದು ವಾದ ಮಾಡಲಾಗುತ್ತಿತ್ತು. ಇದೇ ಕಾರಣಕ್ಕೆ ಈ ಸಾಮಾಜಿಕ ಪಿಡುಗನ್ನು ಕಿತ್ತು ಹಾಕಿ ಹೊಸ ಕಾನೂನು ರೂಪಿಸಲು ಸುಪ್ರೀಂ ಕೋರ್ಟ್  ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಈ ಕುರಿತಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಲಾಗಿತ್ತು. ಇದರ ಬೆನ್ನಲ್ಲೇ ಇಂತಹದ್ದೊಂದು ಪ್ರಕರಣ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹದ ಜತೆಗೆ ಕೊಡಗಿನ ಜನತೆಗೆ ಶಾಕ್ ಕೊಟ್ಟ ಸುಳ್ಳು ಸುದ್ದಿ!