Daily Horoscope
✕

ಮಗಳ ಮುಂದೆಯೇ ತಾಯಿ ಸಾವು!?

Webdunia
ಗುರುವಾರ, 24 ಫೆಬ್ರವರಿ 2022 (10:49 IST)
ಮೆಕ್ಸಿಕೋ : ಜಿಮ್‌ನಲ್ಲಿ ಬೇರ್ಬೆಲ್ ಕುಸಿದು ಮಗಳ ಮುಂದೆಯೇ ಮಹಿಳೆ ಸಾವಿಗೀಡಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
 
180 ಕೆಜಿ ಭಾರದ ತೂಕ ಎತ್ತುವ ವೇಳೆ ಅದು ಮಹಿಳೆಯ ಕುತ್ತಿಗೆ ಮೇಲೆಯೇ ಬಿದ್ದು ಈ ಅನಾಹುತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಹಿಳೆಯ ಪುಟ್ಟ ಮಗಳು ಇದ್ದಳು. ಈ ದುರಂತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೃತಪಟ್ಟವರು ಮೆಕ್ಸಿಕನ್ ಮಹಿಳೆಯಾಗಿದ್ದು, ಅವರ ಹೆಸರು ತಿಳಿದು ಬಂದಿಲ್ಲ. ತಮ್ಮ ಪುತ್ರಿಯೊಂದಿಗೆ ಜಿಮ್ಗೆ ಬಂದು ವ್ಯಾಯಾಮ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಇತರರೆಲ್ಲರೂ ಸ್ಥಳಕ್ಕೆ ಓಡಿ ಬಂದು ಮಹಿಳೆಯ ರಕ್ಷಣೆಗೆ ಯತ್ನಿಸುತ್ತಾರೆ.

ಆದರೆ ಅಷ್ಟರಲ್ಲಾಗಲ್ಲೇ ಅತೀಯಾದ ಭಾರ ಆಕೆಯ ಕುತ್ತಿಗೆಯ ಮೇಲೆ ಬಿದ್ದು ಆಕೆ ಸಾವನ್ನಪ್ಪಿದ್ದರಿಂದ ಯಾರೂ ಏನೂ ಮಾಡಲಾಗಲಿಲ್ಲ. ಎಲ್ಲರೂ ಶಾಕ್ಗೆ ಒಳಗಾಗಿದ್ದರೆ ಓರ್ವ ವ್ಯಕ್ತಿ ಆಕೆಯನ್ನು ಎಳೆಯಲೂ ಪ್ರಯತ್ನಿಸುವುದನ್ನು ನೋಡಬಹುದು.

ಫೆಬ್ರವರಿ 21ರಂದು ಮೆಕ್ಸಿಕೋ ನಗರದಲ್ಲಿರುವ  ಜಿಮ್ ಫಿಟ್ನೆಸ್ ಸ್ಪೋರ್ಟ್ಸ್ ಜಿಮ್ನಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ಮೃತಪಟ್ಟ ಮಹಿಳೆಯನ್ನು ಅಂದಾಜು 35 ರಿಂದ 40  ವರ್ಷದ ಮಹಿಳೆ  ಎಂದು ಅಂದಾಜಿಸಲಾಗಿದೆ.

ಆಕೆ ಸಾವಿಗೀಡಾಗುವ ಮೊದಲು 180 ಕೆಜಿ ತೂಕ ಎತ್ತಲು ಆಕೆ ಮುಂದಾಗಿದ್ದು, ಇದಕ್ಕೂ ಮೊದಲು ಧಡೂತಿ ದೇಹದ ವ್ಯಕ್ತಿಯೊರ್ವ ಬೇರ್ಬೆಲ್ನ ತೂಕವನ್ನು ಸರಿ ಹೊಂದಿಸುತ್ತಿರುವುದು ವಿಡಿಯೋದಲ್ಲಿದೆ. ಆದರೆ ಮಹಿಳೆ ಭಾರ ಎತ್ತಲು ತನ್ನ ಕುತ್ತಿಗೆಯನ್ನು ಬೇರ್ಬೆಲ್ ಕೆಳಭಾಗದಲ್ಲಿ ನುಗ್ಗಿಸಿದ ಕೆಲ ಕ್ಷಣದಲ್ಲೇ ಅದು ಆಕೆಯ ಮೇಲೆ ಬೀಳುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಪ್ಪುಡಿ ಇರುಕ್ಕುಂ…. ಸಿಎಂ ವಿಜಯ್ ಸ್ಟೈಲ್ ನಲ್ಲೇ ಸ್ಲೈಸ್ ಸನ್ನೆ ಮಾಡಿ ಮುರುಗನ್ ಭಕ್ತರ ಸಂಭ್ರಮ Video

ಸಿಎಂ ವಿಜಯ್ ಸರ್ಕಾರಕ್ಕೆ ಮುಖಭಂಗ: ಸುಪ್ರೀಂ ಆದೇಶದಂತೆ ಇಂದು ತಿರುಪ್ಪರಂಕುಂದ್ರನಲ್ಲಿ ಜ್ಯೋತಿ ಬೆಳಗೋದು ಎಷ್ಟೊತ್ತಿಗೆ

Karnataka Weather: ಈ ವಾರಾಂತ್ಯದಲ್ಲಿ ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಗ್ರೇ ಡಿವೋರ್ಸ್ ಎಂದರೇನು, ಭಾರತೀಯ ದಂಪತಿಗಳಲ್ಲಿ ಈ ಟ್ರೆಂಡ್ ಹೆಚ್ಚುತ್ತಿರುವುದು ಯಾಕೆ

ಮದುವೆ ಸೀಸನ್ ಆರಂಭ: ಚಿನ್ನದ ಬೆಲೆ ಮತ್ತೆ ಗಗನಕ್ಕೇರಲಿದೆಯೇ, ಮಾರುಕಟ್ಟೆ ತಜ್ಞರ ಲೆಕ್ಕಾಚಾರ ಏನು

ಮುಂದಿನ ಸುದ್ದಿ
Show comments