ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ವಿಐಪಿಗಳು ಎಂದೇ ಕರೆಯುತ್ತಾರೆ. ತಮ್ಮ ಮದುವೆಯಲ್ಲೂ ಅಭಿಮಾನಿಗಳಿಗೆಂದೇ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅಭಿಮಾನಿಗಳೊಂದಿಗೆ ಪ್ರೀತಿಯಿಂದಲೇ ಬೆರೆಯುತ್ತಾರೆ.
ಇಂತಿಪ್ಪ ಧ್ರುವ ಸರ್ಜಾ ಈಗ ತಮ್ಮ ಅಪ್ಪಟ ಅಭಿಮಾನಿ ದರ್ಶನ್ ಎಂಬವರ ಜಿಮ್ ಗೆ ಸಾಥ್ ಕೊಟ್ಟಿದ್ದಾರೆ. ದರ್ಶನ್ ಹೊಸದಾಗಿ ಜಿಮ್ ಆರಂಭಿಸಿದ್ದು, ಈ ಜಿಮ್ ಗೆ ವಿಶ್ ಮಾಡುವ ಮೂಲಕ ಅಭಿಮಾನಿಗೆ ಬಲ ತುಂಬಿದ್ದಾರೆ.
ಇನ್ನು, ಈ ಜಿಮ್ ನಾಮಫಲಕದಿಂದ ಹಿಡಿದು ಒಳಗೆ ಗೋಡೆಯ ತುಂಬೆಲ್ಲಾ ಧ್ರುವ ಸರ್ಜಾ ಫೋಟೋ ಹಾಕಲಾಗಿದೆ. ಜೊತೆಗೆ ಧ್ರುವ ಸರ್ಜಾ ಜಿಮ್ ಎಂದೇ ಹೆಸರಿಡಲಾಗಿದೆ. ಚಿರು ಸರ್ಜಾ ಫೋಟೋ, ಹೆಸರು ಹಾಕಿ ಸಹೋದರರಿಗೆ ಗೌರವ ಸಲ್ಲಿಸಲಾಗಿದೆ.