ಕೋಲ್ಕೊತ್ತಾ: ಸಾಧನೆ ಮಾಡಬೇಕಾದರೆ ನಾವು ಧರಿಸುವ ಉಡುಪು ಮುಖ್ಯವಾಗುವುದಿಲ್ಲ ಎಂಬುದನ್ನು ಈ ಮಹಿಳೆ ಮಾಡಿ ತೋರಿಸಿದ್ದಾರೆ.
ಬೆಂಗಾಳಿ ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ಬ್ಯಾಕ್ ಫ್ಲಿಪ್ (ಹಿಮ್ಮುಖ ಜಿಗಿತ) ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಿಲ್ಲಿ ಸರ್ಕಾರ್ ಎಂಬಾಕೆ ಮೂಲತಃ ನೃತ್ಯಗಾತಿ ಮತ್ತು ಜಮ್ನಾಸ್ಟ್. ಈಗ ಸೀರೆಯುಟ್ಟುಕೊಂಡೇ ಜಿಗಿದು ಸಾಧನೆ ಮಾಡಿದ್ದಾರೆ. ಈ ದೃಶ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.