Select Your Language

Notifications

webdunia
webdunia
webdunia
webdunia

ಮೋದಿ ಮತ್ತು ಅಮಿತ್ ಶಾಗೆ ಬಿಗ್‌ಗಿಫ್ಟ್ ಕೊಡ್ತಾರಾ ರಾಜಾಹುಲಿ....?

ಮಾಜಿ ಸಿಎಂ ಯಡಿಯೂರಪ್ಪ

geetha

ನವದೆಹಲಿ , ಭಾನುವಾರ, 11 ಫೆಬ್ರವರಿ 2024 (09:29 IST)
ನವದೆಹಲಿ-ಅಸೆಂಬ್ಲಿಯಲ್ಲಿ ಮೋಡಿ ಮಾಡಿದ್ದ ಕಾಂಗ್ರೆಸ್‌ಗೆ ೧೩೫ ಸ್ಥಾನಗಳು ಸಿಕ್ಕಿದ್ದವು.ಯಕಚ್ಚಿತ್ ಅದೇ ರೀತಿಯಾಗಿ ಕರ್ನಾಟಕದಲ್ಲಿ ಕೈ ಸರ್ಕಾರ ಅಧಿಕಾರವನ್ನು ರಚಿಸಿತ್ತು. ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಜೋಡೆತ್ತುಗಳಂತೆ ದರ್ಬಾರ್ ನಡೆಸಿದ್ದಾರೆ.ಅದೇ ರೀತಿಯಾಗಿ ಇತ್ತಾ ಬಿಜೆಪಿಯಲ್ಲಿಯೂ ಕೂಡ ಜೋಡೆತ್ತುಗಳ ಜೋಡಿ ಅಕ್ಷರಶಃ ಮೋಡಿ ಮಾಡಿಯೇ ಬಿಟ್ಟಿದೆ.ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಲವು ತಿಂಗಳುಗಳ ಬಳಿಕ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರನ್ನು ನೇಮಿಸಿ, ಸ್ವತಃ ರಾಜ್ಯ ಬಿಜೆಪಿಯ ನಾಯಕರಿಗೆ ಬಿಗ್‌ಶಾಕ್ ನೀಡಿತ್ತು.

ಹೀಗೆ ರಾಜ್ಯ ರಾಜಕಾರಣದಲ್ಲಿ ಆ ಕಡೆ ಕಾಂಗ್ರೆಸ್ ಮತ್ತು ಈ ಕಡೆ ಬಿಜೆಪಿಯಲ್ಲಿ ಏನೇನು ಸರಿಯಿಲ್ಲ ಅನ್ನೋದು ಈ ಕ್ಷಣದವರೆಗೂ ಆಗ್ತಾ ಬಂದಿದೆ.ಕೈ ಪಾರ್ಟಿಯಲ್ಲಿ ಪವರ್‌ಗಾಗಿ ಕಾದಾಟ ನಡೆದರೆ, ಈ ಕಡೆ ಬಿಜೆಪಿಯಲ್ಲಿ ವಿಜಯೇಂದ್ರಗೆ ಮಣೆ ಹಾಕಿದ್ದೆ, ಪಕ್ಷದಲ್ಲಿದ್ದ ಹಿರಿಯ ನಾಯಕರಿಗೆ ಹೊಟ್ಟೆಯಲ್ಲಿ ಹಸಿ ಮೆಣಸು ಇಟ್ಟು ರುಬ್ಬಿದಾಗೇ ಹಾಗಿತ್ತು.ಅಲ್ಲಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೆಚ್ಚು ಕಮ್ಮಿ ಒಂದೇ ರೀತಿಯಾ ಸಮಸ್ಯೆಗಳು ಹುಟ್ಟಿಕೊಂಡಿದ್ದವು.. ಹಾಗೆ ನೋಡಿದರೆ ಎರಡು ಪಾರ್ಟಿಯೂ ಸಮಸ್ಯೆಗಳ ಆಗರವೇ ಆಗಿದೆ... ಆದರೂ ಇದೀಗ ಮತ್ತೆ ಬಿಜೆಪಿಯೂ ಮತ್ತೆ ಪುಟಿದೇಳುವ ವಿಶ್ವಾಸವನ್ನು ಮರಳಿ ಪಡೆದಿದೆ. 

ಬಿಎಸ್‌ವೈ ಅವರು ಮತ್ತೆ ಬಿಜೆಪಿಯಲ್ಲಿ ಆಕ್ಟಿವ್ ಆಗಿದ್ದಾರೆ. ಪುತ್ರ ವಿಜಯೇಂದ್ರಗೆ ಪಕ್ಷದ ಚುಕ್ಕಾಣಿ ಸಿಕ್ಕ ಬಳಿಕ ಶತಾಯಗತಾಯ ಲೋಕಸಭಾ ಎಲೆಕ್ಷನ್‌ನಲ್ಲಿ ಅಂದುಕೊAಡ ಟಾರ್ಗೆಟ್ ರೀಚ್ ಮಾಡೋದು ರಾಜಾಹುಲಿಯ ಮೈನ್ ಅಜೆಂಡಾ.ಬಿಜೆಪಿಗೆ ರಾಜಾಹುಲಿಯೇ ಮೈನ್ ಪಿಲ್ಲರ್ ಅನ್ನೋದಕ್ಕೆ ಸಾಕ್ಷಿ ಆಗಿದ್ದು, ಶೆಟ್ಟರ್ ಮತ್ತೆ ಮರಳಿ ಗೂಡಿಗೆ ಅನ್ನುವಂತೆ ಪಕ್ಷಕ್ಕೆ ಬಂದAದ್ದು... ಹಾಗೆ ನೋಡಿದರೆ ಇದಕ್ಕೆ ಮೂಲ ಕಾರಣ ಇದೇ ಬಿಎಸ್‌ವೈ. ಅದೇ ರೀತಿಯಾಗಿ ಲಕ್ಷö್ಮಣ್ ಸವದಿ ಕೂಡ ಬಿಜೆಪಿಗೆ ಬರ್ತಾರೆ ಅನ್ನುವ ಸುದ್ದಿ ಬೇಜಾನ್ ಸದ್ದು ಮಾಡ್ತಿದೆ. 

ರಾಜ್ಯ ಬಿಜೆಪಿಯಲ್ಲಿ ರಾಜಕೀಯವಾಗಿ ಚಟುವಟಿಕೆಗಳು ಅಕ್ಷರಶಃ ಚುರುಕಾಗಿವೆ. ಮೋದಿ ಮತ್ತು ಅಮಿತ್ ಶಾ ಬಿಎಸ್‌ವೈಗೆ ಅದೇನು ಹೇಳಿದ್ದಾರೋ ಗೊತ್ತಿಲ್ಲ. ಆದ್ರೆ ಯಡಿಯೂಪರಪ್ಪನವರೂ ಮಾತ್ರ, ಈ ಇಳಿಯ ವಯಸ್ಸಿನಲ್ಲಿಯೂ ಪಕ್ಷದ ಸಂಘಟನೆಗೆ ಇಳಿದು ಬಿಟ್ಟಿದ್ದಾರೆ.. ಪುತ್ರ ವಿಜಯೇಂದ್ರಗೆ ಇನ್ನೊಂದಿಷ್ಟು ಬಲ ತುಂಬಲು ಇಡೀ ರಾಜ್ಯ ಸುತ್ತುವ ಸಂಕಲ್ಪ ಮಾಡಿದಂತಿದೆ.ವಯಸ್ಸಿನ ಎಲ್ಲ ಸವಾಲುಗಳನ್ನು ಪಕ್ಕಕ್ಕಿಟ್ಟು ಚುನಾವಣೆಯಲ್ಲಿ ಭಾಗಿಯಾಗಲು ಮಾಜಿ ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಅಂತೆ.. ಈ ಬಗ್ಗೆ ಈಗಾಗಲೇ ದಿಲ್ಲಿಯಲ್ಲಿ ವರಿಷ್ಠರ ಭೇಟಿ ವೇಳೆ ಚರ್ಚಿಸಿದ್ದಾರೆ ಅಂತೆ ರಾಜಾಹುಲಿ.

ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿದ್ದೇ, ಇತ್ತಾ ಶಿಕಾರಿ ವೀರ ಬಿಎಸ್‌ವೈಗೆ ಪುತ್ರನ ರಾಜಕೀಯ ಭವಿಷ್ಯವನ್ನು ಸದೃಢಗೊಳಿಸುವ ಜವಾಬ್ದಾರಿ ಹೆಚ್ಚಿತ್ತು... ಅದರಲ್ಲೂ ಪಕ್ಷದಲ್ಲೇ ವಿಜಯೇಂದ್ರಗೆ ಮೋದಿ ಮತ್ತು ಅಮಿತ್ ಶಾ ಪಟ್ಟ ಕಟ್ಟಿರೋದು, ಪಕ್ಷದ ಹಲವು ಮಂದಿ ಹಿರಿಯ ನಾಯಕರ ಮುನಿಸಿಗೆ ಕಾರಣವಾಗಿತ್ತು. ಹಾಗಾಗಿ ಪುತ್ರ ವಿಜಯೇಂದ್ರಗೆ ಇಂತಹ ಟೈಂಮಲ್ಲಿ ಬಿಎಸ್‌ವೈ ಅವರ ಬಲ ಅಗತ್ಯವಾಗಿ ಬೇಕಾಗಿತ್ತು.. ಆದ್ದರಿಂದ ಲೋಕಸಭಾ ಎಲೆಕ್ಷನ್ ಸಮೀಪ ಆಗ್ತಾ ಇರುವ ಈ ಹೊತ್ತಲ್ಲೇ ರಾಜಾಹುಲಿ ಬಿಎಸ್‌ವೈ ಫುಲ್ ಆಕ್ಟಿವ್ ಆಗಿದ್ದಾರೆ.
 
ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಪದಗ್ರಹಣ ಮಾಡಿದ ಬಳಿಕ ೨೮ಕ್ಕೆ ೨೮ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋದು ಗುರಿ ಅಂತ ಹೇಳಿದ್ರು... ಅದೇ ರೀತಿಯಾಗಿ ಇದೀಗ ಬಿಎಸ್‌ವೈ ಕೂಡ ಇದೇ ಮಾತಿಗೆ ಬದ್ದರಾಗಿ ಪೂರ್ಣ ಪ್ರಮಾಣದ ಕ್ಲೀನ್ ಸ್ವೀಪ್ ಮಾಡಲು ರಣತಂತ್ರ ಹೆಣೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಮೈಸೂರಿಗೆ ಚಾಣಕ್ಯ ಭೇಟಿ