Publish Date: Mon, 03 Jan 2022 (17:44 IST)
Updated Date: Mon, 03 Jan 2022 (20:45 IST)
ಗುಜರಾತ್‌ನ ತಾಪಿ ಜಿಲ್ಲೆಯ ಸೋಂಗಾಧ್ ತಾಲೂಕಿನ ಚರ್ಚ್ನ 39 ವರ್ಷದ ಪಾದ್ರಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು.
ಗಂಡ ಮಾಡುತ್ತಿರುವ ಹೀನ ಕೆಲಸವನ್ನು ಪತ್ನಿಯೇ ವಿಡಿಯೋ ಶೂಟ್ ಮಾಡಿಕೊಂಡಿದ್ದು ಅನ್ನು ಇಟ್ಟುಕೊಂಡು ಅಪ್ರಾಪ್ತೆಯನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು.
ಈ ವರ್ಷದ ಮೇ ತಿಂಗಳಿನಲ್ಲಿಯೇ ಪ್ರಕರಣ ನಡೆದಿದೆ. ಆದರೆ ಅದರ ಬಗ್ಗೆ ಮಂಗಳವಾರ ಸೋಂಗಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದಲ್ಲಿ ಪಾದ್ರಿ ಬಲಿರಾಮ್ ಕೊಕ್ನಿ ಮತ್ತು ಅವರ ಪತ್ನಿ ಅನಿತಾ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
16 ವರ್ಷದ ಬಾಲಕಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದಳು. ಚರ್ಚೆ ಗೆ ಪ್ರಾರ್ಥನೆಗೆ ಬರುತ್ತಿದ್ದ ಬಾಲಕಿಯನ್ನು ಪಾದ್ರಿ ನಂಬಿಸಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ನಂತರ ಒಬ್ಬನೇ ಈರುವಾಗ ಏಕಾಂತದಲ್ಲಿ ಬಂದು ಭೇಟಿ ಮಾಡುವಂತೆ ತಿಳಿಸಿದ್ದಾನೆ.
ಅವಕಾಶ ಬಳಸಿಕೊಂಡು ಬಾಲಕಿಯ ಮೇಲೆ ಎರಗಿದ್ದು ಪತ್ನಿ ಅನಿತಾ ಪೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾಳೆ. ಇವರ ಮೇಲಿನ ಭಯದ ಕಾರಣಕ್ಕೆ ಅಪ್ರಾಪ್ತೆ ಪೊಲೀಸ್ ದೂರು ದಾಖಲಿಸಲು ಹೋಗಿಲ್ಲ. ಆದರೆ ಈಗ ಹಿಂಸೆ ತಾಳಲಾರದೆ ದೂರು ದಾಖಲಿಸಿದ್ದು ಆರೋಪಿಗಳನ್ನು ಬಂಧಿಸಲಾಗಿತ್ತು.