Publish Date: Mon, 24 Sep 2018 (13:30 IST)
Updated Date: Mon, 24 Sep 2018 (13:32 IST)
ನವದೆಹಲಿ: ಜಗಳವಾಡಿದ ಮೇಲೆ ಕಾಂಪ್ರಮೈಸ್ ಮಾಡಿಕೊಂಡು ಪ್ರೀತಿಯಿಂದ ಪತ್ನಿ ಕಿಸ್ ಮಾಡಲು ಬಂದಾಗ ಆ ಪತಿ ಖುಷ್ ಆಗಿದ್ದ. ಆದರೆ ಆಮೇಲೆ ಆ ಕಿಸ್ ಎಂಥಾ ಆಪತ್ತು ತಂದಿತು ಎಂದು ಗೊತ್ತಾಗುವಷ್ಟರಲ್ಲಿ ಎಡವಟ್ಟಾಗಿ ಹೋಗಿತ್ತು!
ಇದು ನಡೆದಿದ್ದು ದೆಹಲಿಯಲ್ಲಿ. ಗರ್ಭಿಣಿ ಪತ್ನಿಯೊಬ್ಬಳು ತನ್ನ ಪತಿ ನೋಡಲು ಚೆನ್ನಾಗಿಲ್ಲವೆಂದು ದಿನಾ ತಗಾದೆ ತೆಗೆಯುತ್ತಿದ್ದಳಂತೆ. ಮೊನ್ನೆಯೂ ಇದೇ ರೀತಿ ಇಬ್ಬರೂ ಜಗಳವಾಡಿಕೊಂಡು ಕೊನೆಗೆ ಕಾಂಪ್ರಮೈಸ್ ಮಾಡಿಕೊಂಡರು. ಅದೇ ಖುಷಿಯಲ್ಲಿ ಪತ್ನಿ ಪತಿಗೆ ಕಿಸ್ ಮಾಡಿದ್ದಳು.
ಆದರೆ ಕಿಸ್ ಮಾಡುವಾಗಲೇ ಅವಾಂತರ ನಡೆದಿದ್ದು! ಕಿಸ್ ಮಾಡುತ್ತಾ ಆಕೆ ಪತಿಯ ಅರ್ಧದಷ್ಟು ನಾಲಿಗೆಯನ್ನು ಕಚ್ಚಿ ತುಂಡರಿಸಿದ್ದಳು! ಇದೀಗ ಪತಿಯ ತಂದೆ ಸೊಸೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಆಕೆಯನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.