Select Your Language

Notifications

webdunia
webdunia
webdunia
webdunia

ಪ್ರಧಾನಿ ಆಫರ್ ನೀಡಿದರೂ ಇಂಡಿಯಾ ಒಕ್ಕೂಟದ ಜೊತೆ ನಿತೀಶ್ ಕುಮಾರ್ ಹೋಗದೇ ಇರಲು ಕಾರಣ ಬಯಲು

Nitish Kumar

Krishnaveni K

ನವದೆಹಲಿ , ಶನಿವಾರ, 8 ಜೂನ್ 2024 (17:03 IST)
ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಜೆಡಿಯು ಮತ್ತು ಟಿಡಿಪಿ ಪಾರ್ಟಿಗೆ ಭರ್ಜರಿ ಬೇಡಿಕೆ ಬಂದಿತ್ತು. ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟಕ್ಕೆ ಸರ್ಕಾರ ರಚಿಸಲು ಈ ಎರಡು ಪಕ್ಷಗಳ ಬೆಂಬಲ ಅಗತ್ಯವಿತ್ತು.

ಇಂತಹ ಸಂದರ್ಭದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುರನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಇನ್ನಿಲ್ಲದಂತೆ ಕಸರತ್ತು ನಡೆಸಿದ್ದರು. ಆದರೆ ಈ ಇಬ್ಬರೂ ನಾಯಕರು ಎನ್ ಡಿಎ ಬಿಟ್ಟು ಬರಲು ಒಪ್ಪಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ರಚಿಸುವ ಪ್ರಯತ್ನಕ್ಕೆ ತಣ್ಣೀರೆರಚಿದಂತಾಯಿತು.

ಈ ನಡುವೆ ಕಾಂಗ್ರೆಸ್ ನಾಯಕರು ಈ ಇಬ್ಬರೂ ನಾಯಕರಿಗೆ ಇಂಡಿಯಾ ಒಕ್ಕೂಟ ಬೆಂಬಲಿಸಲು ಭಾರೀ ಆಫರ್ ನೀಡಿದ್ದರು ಎನ್ನಲಾಗಿದೆ.  ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟ ನೀಡುವುದಾಗಿ ಆಫರ್ ನೀಡಲಾಗಿತ್ತು ಎನ್ನಲಾಗಿತ್ತು. ಆದರೆ ಪ್ರಧಾನಿ ಹುದ್ದೆಯನ್ನೇ ನೀಡುವುದಾಗಿ ಆಫರ್ ನೀಡಿದ್ದಾಗಿ ಇದೀಗ ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.

ಆದರೆ ಚುನಾವಣೆ ಸಮಯದಲ್ಲಿ ಇಂಡಿಯಾ ಒಕ್ಕೂಟದಲ್ಲಿದ್ದಾಗ ಅನ್ಯಾಯವಾಗಿದ್ದರಿಂದ ನಿತೀಶ್ ಯಾವುದೇ ಕಾರಣಕ್ಕೂ ಇಂಡಿಯಾ ಒಕ್ಕೂಟ ಬೆಂಬಲಿಸದೇ ಇರಲು ತೀರ್ಮಾನಿಸಿದರು ಎಂದು ತ್ಯಾಗಿ ಹೇಳಿದ್ದಾರೆ.  ಈಗ ಎನ್ ಡಿಎಗೆ ಬೆಂಬಲಸಿದ್ದೇವೆ. ಇನ್ನು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಲ್ಟಾ ಹೊಡೆದ ಚುನಾವಣಾ ಫಲಿತಾಂಶ: ಪ್ರತಿಜ್ಞೆ ಮಾಡಿದ ಪ್ರಶಾಂತ್ ಕಿಶೋರ್