Select Your Language

Notifications

webdunia
webdunia
webdunia
webdunia

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನರೇಂದ್ರ ಮೋದಿ

Narendra Modi

Krishnaveni K

ನವದೆಹಲಿ , ಬುಧವಾರ, 5 ಜೂನ್ 2024 (14:36 IST)
ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಬಂದ ಹಿನ್ನಲೆಯಲ್ಲಿ ಹೊಸ ಸರ್ಕಾರ ರಚಿಸಲು ಅನುವು ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲು ರಾಷ್ಟ್ರಪತಿ ಭವನಕ್ಕೆ ಬಂದಿದ್ದಾರೆ.

ಲೋಕಸಭೆ ಚುನಾವಣೆ 2024 ರಲ್ಲಿ 240 ಸೀಟು ಗೆದ್ದಿರುವ ಬಿಜೆಪಿ ಈಗ ಮಿತ್ರ ಪಕ್ಷಗಳ ನೆರವಿನೊಂದಿಗೆ 292 ಸ್ಥಾನಗಳನ್ನು ಪಡೆದುಕೊಂಡಿದೆ. ಇದೀಗ ಮಿತ್ರಪಕ್ಷಗಳು ಸಹಕಾರ ನೀಡಿದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಹೊಸ ಸರ್ಕಾರ ರಚಿಸಬಹುದಾಗಿದೆ.

ಇಂದು ದೆಹಲಿಯಲ್ಲಿ ಎನ್ ಡಿಎ ಮಿತ್ರ ಪಕ್ಷಗಳ ಸಭೆ ಕರೆದಿದ್ದಾರೆ.  ಈ ಸಭೆಗೆ ಮುನ್ನ ಪ್ರಧಾನಿ ಮೋದಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಇದಾದ ಬಳಿಕ ಮಿತ್ರಪಕ್ಷಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ.

ಈಗಾಗಲೇ ಚಂದ್ರಬಾಬು ನಾಯ್ಡು ಎನ್ ಡಿಎ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ. ನಿತೀಶ್ ಕುಮಾರ್ ಕೂಡಾ ದೆಹಲಿಗೆ ತಲುಪಿದ್ದು ಅವರ ನಡೆಯೇನೆಂಬುದು ನಿಗೂಢವಾಗಿದೆ. ಇದೀಗ ಮೋದಿ ಶನಿವಾರ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರಪತಿಗಳ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಡೇಟ್‌ ಫಿಕ್ಸ್