Select Your Language

Notifications

webdunia
webdunia
webdunia
webdunia

ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಡೇಟ್‌ ಫಿಕ್ಸ್

ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಡೇಟ್‌ ಫಿಕ್ಸ್

sampriya

ಬೆಂಗಳೂರು , ಬುಧವಾರ, 5 ಜೂನ್ 2024 (14:30 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಮೂಲಕ ಕಾಂಗ್ರೆಸ್ ಧೀಮಂತ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ನಂತರ ಮೂರು ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. 

2014 ರಲ್ಲಿ 282 ಸ್ಥಾನಗಳನ್ನು ಮತ್ತು 2019 ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಹಾಗೂ ಈ ಬಾರಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ.  272 ಬಹುಮತಕ್ಕೆ 32 ಕಡಿಮೆಯಾಗಿದೆ. ಇದು ಈಗ ಮೂರನೇ ಅವಧಿ ಬಿಜೆಪಿ ಅಧಿಕಾರ ಪಡೆಯಲು ಪಕ್ಷದ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್‌ನ ಸದಸ್ಯರು ಗೆದ್ದಿರುವ 53 ಸ್ಥಾನಗಳನ್ನು ಅವಲಂಬಿಸಿದೆ.

ಇನ್ನೂ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ೧೭ನೇ ಲೋಕಸಭೆಯನ್ನು ವಿಸರ್ಜಿಸಲು ಸಭೆ ನಡೆಸಲಾಯಿತು.

ನಿನ್ನೆ ಫಲಿತಾಂಶ ಪ್ರಕಟವಾದ ನಂತರ ಮೋದಿ ಅವರು ಎಕ್ಸ್‌ನಲ್ಲಿ ಮತದಾರ ಬಂಧುಗಳಿಗೆ ಕೃತಜ್ಞನೆ ಸಲ್ಲಿಸಿದರು.  ಎನ್‌ಡಿಎ ಮೂರನೇ ಬಾರಿಗೆ ಸರ್ಕಾರ ರಚಿಸಲಿದ್ದು, ಇದು "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಜಯ" ಎಂದು ಕರೆದರು




Share this Story:

Follow Webdunia kannada

ಮುಂದಿನ ಸುದ್ದಿ

ಎನ್ ಡಿಎ ಸರ್ಕಾರದಲ್ಲಿ ದೇವೇಗೌಡರ ಕುಟುಂಬದ ಇಬ್ಬರಿಗೆ ಮಂತ್ರಿಗಿರಿ ಫಿಕ್ಸ್