Publish Date: Tue, 31 Jul 2018 (15:26 IST)
Updated Date: Tue, 31 Jul 2018 (15:32 IST)
ಕೋಲ್ಕತ್ತಾ : ಗೋಮಾಂಸ ಸೇವನೆ ನಿಷೇಧಿಸುವ ಕುರಿತು ದೇಶದಾದ್ಯಂತ ಬಾರೀ ಚರ್ಚೆಗಳು ನಡೆಯುತ್ತಿರುವ ಈ ವೇಳೆ ಇದೀಗ ಬಿಜೆಪಿ ನೇತಾರರೊಬ್ಬರು ಹಿಂದೂಗಳು ಮೇಕೆ ಮಾಂಸವನ್ನು ತಿನ್ನುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು ಮಹಾತ್ಮ ಗಾಂಧೀಜಿಯವರು ಮೇಕೆಯನ್ನು ಮಾತೆ ಎಂದು ಕರೆಯುತ್ತಿರುವ ಕಾರಣ ಹಿಂದೂಗಳು ಅದನ್ನು ತಿನ್ನುವುದನ್ನು ಬಿಡಬೇಕು ಎಂದು ಟ್ವೀಟ್ ಮಾಡಿ ಆಶ್ಚರ್ಯವನ್ನುಂಟುಮಾಡಿದ್ದಾರೆ.
‘ಗಾಂಧೀಜಿ ಅವರು ಕೊಲ್ಕತ್ತಾದ ವುಡ್‍ಬರ್ನ್ ಪಾರ್ಕ್ ನಲ್ಲಿರುವ ನನ್ನ ತಾತ ಸರತ್ ಚಂದ್ರ ಬೋಸ್ ಅವರ ಮನೆಯಲ್ಲಿ ವಾಸವಾಗಿದ್ದಾಗ ಅಲ್ಲಿ ಮೇಕೆ ಹಾಲನ್ನೇ ಸೇವಿಸುತ್ತಿದ್ದರು. ಹಿಂದೂಗಳ ರಕ್ಷಕನಾಗಿದ್ದ ಗಾಂಧಿ ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಅವರು ಮಾತೆ ಎಂದು ತಿಳಿದುಕೊಂಡಿದ್ದರು. ಹಾಗಾಗಿ ಹಿಂದೂಗಳು ಮೇಕೆ ಮಾಂಸ ಸೇವನೆ ನಿಲ್ಲಿಸಬೇಕು’ ಎಂದು ಬೋಸ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ