Publish Date: Thu, 08 Mar 2018 (12:11 IST)
Updated Date: Thu, 08 Mar 2018 (12:16 IST)
ನವದೆಹಲಿ: ತ್ರಿಪುರಾದಲ್ಲಿ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಕೆಳಗುರುಳಿಸಿದ ಮೇಲೆ ಇದೀಗ ದೇಶದಲ್ಲಿ ದುಷ್ಕರ್ಮಿಗಳಿಂದ ನಾಯಕರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಛಟ ಶುರುವಾಗಿದೆ.
ತಮಿಳುನಾಡಿನಲ್ಲಿ ಮೊನ್ನೆ ಪೆರಿಯಾರ್ ಪ್ರತಿಮೆ ಧ್ವಂಸಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಕೇರಳದ ಕಣ್ಣೂರಿನಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹಾನಿ ಮಾಡಿರುವ ಘಟನೆ ವರದಿಯಾಗಿದೆ.
ಇನ್ನೊಂದೆಡೆ ಬಾಬಾ ಅಂಬೇಡ್ಕರ್ ಪ್ರತಿಮೆಗೂ ಹಾನಿ ಮಾಡಲಾಗಿದೆ. ಅಂತೂ ಇದೊಂದು ಕೆಟ್ಟ ಛಟವಾಗಿ ವ್ಯಾಪಿಸುತ್ತಿದೆ. ಈಗಾಗಲೇ ಇಂತಹ ಗಲಭೆಕೋರರ ಮೇಲೆ ಕ್ರಮ ಕೈಗೊಳ್ಳಲು ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ