Publish Date: Wed, 07 Mar 2018 (09:16 IST)
Updated Date: Wed, 07 Mar 2018 (09:18 IST)
ಲಕ್ನೋ: ನಾನೊಬ್ಬ ಹಿಂದೂ ಧರ್ಮದ ಪರಮ ಭಕ್ತ, ಆರಾಧಕ. ನಾನೇಕೆ ಈದ್ ಮಿಲಾದ್ ಹಬ್ಬ ಆಚರಿಸಲಿ? ಹೀಗಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅವರ ಈ ಹೇಳಿಕೆ ಹಲವರ ಹುಬ್ಬೇರುವಂತೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷಕ್ಕೆ ಟಾಂಗ್ ಕೊಟ್ಟ ಸಿಎಂ ಯೋಗಿ ‘ನಾನು ಹಿಂದೂ ಧರ್ಮದ ಆರಾಧಕ ಮತ್ತು ಈದ್ ಆಚರಿಸಲ್ಲ. ನನ್ನ ಧರ್ಮದ ಬಗ್ಗೆ ನನಗೆ ಗೌರವ, ಹೆಮ್ಮೆಯಿರುವಾಗ ಬೇರೆ ಧರ್ಮದ ಹಬ್ಬಗಳನ್ನು ಯಾಕೆ ಆಚರಿಸಲಿ? ನಾನು ಪ್ರಾರ್ಥನೆ ಮಾಡಲು ಜನಿವಾರಧಾರಿ ಬ್ರಾಹ್ಮಣನೂ ಅಲ್ಲ, ಹಾಗೆಯೇ ಟೋಪಿ ಇಡುವವನೂ (ಮುಸ್ಲಿಂ ಟೋಪಿ) ಅಲ್ಲ’ ಎಂದು ಯೋಗಿ ಲೇವಡಿ ಮಾಡಿದ್ದಾರೆ.
ಇದಕ್ಕೂ ಮೊದಲು ಸಿಎಂ ಯೋಗಿ ಹೋಲಿ ಹಬ್ಬದ ವರ್ಷಕ್ಕೊಮ್ಮೆ ಬರುವ ಕಾರಣ ಗೌರವ ಕೊಡಬೇಕು. ಆದರೆ ನಮಾಜ್ ಪ್ರಾರ್ಥನೆ ಪ್ರತೀ ದಿನವೂ ನಡೆಯುತ್ತದೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ