Select Your Language

Notifications

webdunia
webdunia
webdunia
webdunia

ಮೋದಿ ಸರ್ಕಾರದಲ್ಲಿ ಇಂದು ಯಾರಿಗೆಲ್ಲಾ ಸಿಗಲಿದೆ ಖಾತೆ

Modi

Krishnaveni K

ನವದೆಹಲಿ , ಭಾನುವಾರ, 9 ಜೂನ್ 2024 (09:46 IST)
ನವದೆಹಲಿ: ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಮೋದಿ ಜೊತೆಗೆ ಇಂದು ಕೆಲವು ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಯಾರಿಗೆಲ್ಲಾ ಖಾತೆ ಸಿಗಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ.

ಬಿಜೆಪಿಗೆ ಈ ಬಾರಿ ಬಹುಮತ ಬಂದಿಲ್ಲ. ಈ ಕಾರಣಕ್ಕೆ ಟಿಡಿಪಿ, ಜೆಡಿಯುನಂತಹ ಮಿತ್ರ ಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸುತ್ತಿದೆ. ಹೀಗಾಗೀ ಈ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ನೀಡಬೇಕಾಗುತ್ತದೆ. ಈಗಾಗಲೇ ಖಾತೆ ಹಂಚಿಕೆ ಬಗ್ಗೆ ಮೋದಿ ಮತ್ತು ಬಳಗ ಲೆಕ್ಕಾಚಾರ ಹಾಕಿದೆ.

ಅದರಂತೆ ಇಂದು ಮೋದಿ ಜೊತೆಗೆ ಟಿಡಿಪಿಯ ನಾಲ್ವರು, ಜೆಡಿಯು ಪಕ್ಷದ ಇಬ್ಬರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದರೆ ಅವರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಇದರ ಜೊತೆಗೆ ರಾಜ್ಯದಿಂದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಡಾ ಸಿಎನ್ ಮಂಜುನಾಥ್, ಪ್ರಹ್ಲಾದ್ ಜೋಶಿ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಜೊತೆಗೆ ತಮಿಳುನಾಡಿನಲ್ಲಿ ಸಂಚಲನವುಂಟು ಮಾಡಿರುವ ನಾಯಕ ಅಣ್ಣಾಮಲೈಗೂ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಿದೆ.

ಇವರೊಂದಿಗೆ ಬಿಜೆಪಿಯ ಚಾಣಕ್ಷ್ಯ ಅಮಿತ್ ಶಾ, ಹಿರಿಯ ಸಂಸದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಕೂಡಾ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಸಂಜೆ 7.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಮೂರನೇ ಬಾರಿ ನರೇಂದ್ರ: ಇಂದು ಮೋದಿ ಪ್ರಮಾಣವಚನ ಸಮಯ, ಸ್ಥಳ ಮಾಹಿತಿ ಇಲ್ಲಿದೆ