Publish Date: Wed, 04 Jun 2025 (10:13 IST)
Updated Date: Wed, 04 Jun 2025 (10:16 IST)
ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿವರ್ಷ ರೈತರಿಗೆ ಮೂರು ಕಂತುಗಳಲ್ಲಾಗಿ 6,000 ರೂ. ಆರ್ಥಿಕ ಸಹಾಯ ನೀಡುತ್ತದೆ. ಇದು ನೇರವಾಗಿ ಫಲಾನುಭವಿ ರೈತರ ಖಾತೆಗೆ ಬಂದು ಸೇರುತ್ತದೆ.
ಈಗಾಗಲೇ 19 ಕಂತುಗಳ ಹಣ ರೈತರ ಖಾತೆಗೆ ಜಮೆ ಆಗಿದೆ. ಇದೀಗ 20 ನೇ ಕಂತಿನ ಹಣಕ್ಕಾಗಿ ಫಲಾನುಭವಿಗಳು ಎದಿರು ನೋಡುತ್ತಿದ್ದಾರೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಹಣ ನೀಡಲಾಗುತ್ತದೆ. 2019 ರಲ್ಲಿ ಈ ಯೋಜನೆ ಆರಂಭವಾಗಿತ್ತು.
19 ನೇ ಕಂತಿನ ಹಣ ಫೆಬ್ರವರಿಯಲ್ಲಿ ರೈತರ ಖಾತೆಗೆ ಬಂದಿತ್ತು. ಇದೀಗ 20 ನೇ ಕಂತಿನ ಹಣ ಜೂನ್ ಅಂತ್ಯದಲ್ಲಿ ಬರುವ ನಿರೀಕ್ಷೆಯಿದೆ. ಅಧಿಕೃತ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ಜೂನ್ ಕೊನೆಯ ವಾರದಲ್ಲಿ ಬರುವುದು ಪಕ್ಕಾ ಆಗಿದೆ. ಹೆಚ್ಚಿನ ವಿವರಗಳನ್ನು
http://pmkisan.gov.in. ವೆಬ್ ಸೈಟ್ ಗೆ ಭೇಟಿ ನೀಡಿ ಪಡೆಯಬಹುದಾಗಿದೆ.