Webdunia - Bharat's app for daily news and videos

Install App

ಎಡ್ವಿನಾ ಮೌಂಟ್ ಬೇಟನ್ ಗೆ ನೆಹರೂ ಬರೆದ ಪತ್ರದಲ್ಲಿ ಏನಿದೆ: ಕೇಂದ್ರ ಯಾಕೆ ಪತ್ರ ಕೇಳುತ್ತಿದೆ

Krishnaveni K
ಮಂಗಳವಾರ, 17 ಡಿಸೆಂಬರ್ 2024 (09:36 IST)
ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಬ್ರಿಟಿಷ್ ಕೊನೆಯ ವೈಸರೀನ್ ಎಡ್ವಿನಾ ಮೌಂಟ್ ಬೇಟನ್ ಗೆ ಬರೆದ ಪತ್ರವನ್ನು ಹಿಂದಿರುಗಿಸುವಂತೆ ಈಗ ಕೇಂದ್ರ ಸರ್ಕಾರ ರಾಹುಲ್ ಗಾಂಧಿಗೆ ಕೇಳುತ್ತಿದೆ. ಅಷ್ಟಕ್ಕೂ ಈ ಪತ್ರದಲ್ಲಿ ಅಂತಹದ್ದೇನಿತ್ತು ಎಂಬ ಕುತೂಹಲ ಎಲ್ಲರಿಗಿದೆ.

2008 ರಲ್ಲಿ ಯುಪಿಎ ಅಧಿಕಾರಾವಧಿಯಲ್ಲಿ ನೆಹರೂ ಅನೇಕರಿಗೆ ಬರೆದ ಪತ್ರಗಳ ಸುಮಾರು 51 ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಂತೆ. ಅದನ್ನು ಅವರು ಮರಳಿ ನೀಡಿಲ್ಲ. ಈ ಪತ್ರಗಳ ಪೈಕಿ ನೆಹರೂ ವೈಸರೀನ್ ಎಡ್ವಿನಾಗೆ ಬರೆದ ಪತ್ರವೂ ಇದೆ ಎನ್ನಲಾಗಿದೆ. ಆ ಪತ್ರವನ್ನು ಒರಿಜಿನಲ್ ಅಥವಾ ಇನ್ನೊಂದು ಪ್ರತಿಯನ್ನಾದರೂ ನೀಡಿ. ಅದನ್ನು ನಾವು ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯದಲ್ಲಿ ಇರಿಸುತ್ತೇವೆ ಎಂದು ಕೇಂದ್ರ ಕೇಳಿದೆ.

ಆದರೆ ಈ ಪತ್ರವನ್ನು ಮರಳಿಸಲು ಸೋನಿಯಾ ಗಾಂಧಿಯವರು ಹಿಂದೇಟು ಹಾಕುವುದು ಯಾಕೆ ಎಂಬುದು ಬಿಜೆಪಿ ಪ್ರಶ್ನೆ. ಹೀಗಾಗಿ ಈ ವಿಚಾರಕ್ಕೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ನೆಹರೂ ಮತ್ತು ಎಡ್ವಿನಾ ನಡುವೆ ಅಪರಿಮಿತ ಸ್ನೇಹವಿತ್ತು ಎಂಬುದು ಎಡ್ವಿನಾ ಮಗಳು ಪಮೇಲಾ ಬರೆದ ಪತ್ರದಲ್ಲಿ ಉಲ್ಲೇಖವಾಗಿತ್ತು.

ಹೀಗಾಗಿ ಈ ಪತ್ರದಲ್ಲೂ ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಆಳದ ಕುರಿತು ಮಾಹಿತಿಯಿರಬಹುದು ಎನ್ನಲಾಗಿದೆ. ಹೀಗಾಗಿ ಈ ಪತ್ರದ ನಕಲು ಪ್ರತಿ ಅಥವಾ ಡಿಜಿಟಲ್ ಪ್ರತಿಯನ್ನಾದರೂ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ. ಪತ್ರದಲ್ಲಿ ಅನೇಕ ರಹಸ್ಯಗಳಿರಬಹುದು ಎಂಬುದು ಬಿಜೆಪಿ ಗುಮಾನಿಯಾಗಿದೆ. ಇದೇ ಕಾರಣಕ್ಕೆ ಸೋನಿಯಾ, ರಾಹುಲ್ ಈ ಪತ್ರವನ್ನು ಹಿಂತಿರುಗಿಸುತ್ತಿಲ್ಲ ಎಂಬುದು ಬಿಜೆಪಿ ಆರೋಪವಾಗಿದೆ. ಆದರೆ ಈ ವಿಚಾರದ ಬಗ್ಗೆ ಗಾಂಧಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments