Select Your Language

Notifications

webdunia
webdunia
webdunia
webdunia

ಕೂಸು ಕಂದಮ್ಮಗಳ ರಕ್ಷಣೆ ಎಲ್ಲಿದೆ?!

ಕೂಸು ಕಂದಮ್ಮಗಳ ರಕ್ಷಣೆ ಎಲ್ಲಿದೆ?!
ನವದೆಹಲಿ , ಸೋಮವಾರ, 24 ಜನವರಿ 2022 (14:53 IST)
ಭುವನೇಶ್ವರ್ : ಐದು ವರ್ಷದ ಪುಟ್ಟ ಬಾಲಕಿಯನ್ನ ಚಾಲಕ ಅತ್ಯಾಚಾರ ಮಾಡಿದ ಘಟನೆ ಒಡಿಶಾದ ಪುರಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಕುಟುಂಬಕ್ಕೆ ಪರಿಚಯವಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ, ಬಾಲಕಿಯನ್ನು ಮನೆಯ ಟೆರೇಸ್ಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಮನೆಗೆ ಬಂದ ಬಾಲಕಿಯ ಅಮ್ಮ ಮಗಳ ಕಿರುಚಾಟವನ್ನು ಕೇಳಿ ಟೆರೇಸ್ ಗೆ ಹೋಗಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಸಿಂಗ್, ಬಾಲಕಿಯ ಕುಟುಂಬಕ್ಕೆ ಪರಿಚಯವಿದ್ದ ವ್ಯಕ್ತಿಯೇ ಈ ಕೃತ್ಯವನ್ನ ಮಾಡಿದ್ದಾನೆ. ಆತ ಡ್ರೈವರ್ ವೃತ್ತಿ ಮಾಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಆರೋಪಿ ಜಗತ್ಸಿಂಗ್ಪುರ ಜಿಲ್ಲೆಯವನು ಎಂದು ತಿಳಿದುಬಂದಿದೆ. ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ಪುನಾರಚನೆ ವರಿಷ್ಠರ ನಿರ್ಧರ?