Publish Date: Sun, 23 Jan 2022 (09:39 IST)
Updated Date: Sun, 23 Jan 2022 (09:40 IST)
ಬೆಂಗಳೂರು: ನಗರ ಪ್ರದೇಶದಲ್ಲಿ ಮಕ್ಕಳನ್ನು ಮಾತ್ರ ಮನೆಯಲ್ಲಿ ಬಿಟ್ಟು ಹೋಗುವ ಪೋಷಕರು ಗಮನಿಸಬೇಕಾದ ಸುದ್ದಿಯಿದು.
ತಾಯಿ ಕೆಲಸಕ್ಕೆ ಹೋಗಿದ್ದಾಗ ಒಬ್ಬಳೇ ಮನೆಯಲ್ಲಿದ್ದ 8 ವರ್ಷದ ಬಾಲಕಿ ಮೇಲೆ ನೆರೆಮನೆಯಾತನೇ ಅತ್ಯಾಚಾರವೆಸಗಿದ ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ.
ಬಾಲಕಿಯ ತಾಯಿ ಮಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವುದನ್ನು ಗಮನಿಸಿದ ಯುವಕ ದುಷ್ಕೃತ್ಯವೆಸಗಿದ್ದಾನೆ. ಮನೆಗೆ ತಾಯಿ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅತ್ಯಾಚಾರವೆಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.