Publish Date: Sat, 22 Jan 2022 (09:50 IST)
Updated Date: Sat, 22 Jan 2022 (09:51 IST)
ಬೆಂಗಳೂರು: ನಾಟಿ ಔಷಧಿ ನೀಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಬಳಿಗೆ ಔಷಧ ಕೊಳ್ಳಲು ಬಂದಾಗ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಆಸೆ ಬಿದ್ದು, ಕೊಲೆ ಮಾಡಿ ಪರಾರಿಯಾಗಿದ್ದಾನೆ.
50 ವರ್ಷದ ಆರೋಪಿ ಸಲೀಂ ಎಂಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈತ ಮಧುಮೇಹ ಖಾಯಿಲೆಗೆ ನಾಟಿ ಔಷಧ ಕೊಡುತ್ತಿದ್ದ. ಮೃತ ಮಹಿಳೆ ಕೆಲವು ಸಮಯದಿಂದ ಈತನ ಬಳಿ ಔಷಧಿಗೆ ಬರುತ್ತಿದ್ದಳು.
ಹಾಗೆಯೇ ಈ ಬಾರಿಯೂ ಬಂದಾಗ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ, ಕಿವಿಯೋಲೆ ಸೇರಿದಂತೆ ಆಭರಣಗಳನ್ನು ದೋಚಿದ್ದು, ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ನಿ ಮನೆಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.