Daily Horoscope

Select Your Language

Notifications

webdunia
webdunia
webdunia
webdunia

ಅದ್ಧೂರಿ ಮದುವೆ ಆಸೆಗೆ ಬಿದ್ದು ದರೋಡೆ ಮಾಡಿದ ವರ!

ಮದುವೆ
ಹುಬ್ಬಳ್ಳಿ: ತನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕು ಎಂಬ ಆಸೆಯಿಂದ ವರ ಮಹಾಶಯ ಬ್ಯಾಂಕ್ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ಆರೋಪ ಪ್ರವೀಣ್ ಕುಮಾರ್ ಎಂಬಾತನ ಮದುವೆ ಫಿಕ್ಸ್ ಆಗಿತ್ತು. ಆದರೆ ಸಾಧಾರಣ ಕುಟುಂಬದಿಂದ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಗೆ ಅದ್ಧೂರಿಯಾಗಿ ಮದುವೆ ಮಾಡುವ ಸಾಮರ್ಥ್ಯವಿರಲಿಲ್ಲ. ಆದರೆ ಹೇಗಾದರೂ ತನ್ನ ಕನಸು ನನಸು ಮಾಡಿಕೊಳ್ಳಬೇಕು ಎಂಬ ಆಸೆಗೆ ಬಿದ್ದ ಪ್ರವೀಣ್ ಹುಬ್ಬಳ್ಳಿಯಲ್ಲಿ ಬ್ಯಾಂಕ್ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ಮದುವೆ ಜೊತೆಗೆ ತಾನು ಈ ಮೊದಲು ಮಾಡಿದ್ದ ಸಾಲವೂ ತೀರುತ್ತದೆ ಎಂಬ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ. ಆದರೆ ಈಗ ಮದುವೆಯೂ ಇಲ್ಲ, ಹಣವೂ ಇಲ್ಲ. ಪ್ರವೀಣ್ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತಾಂತರ ಕಿರುಕುಳ : ವಿದ್ಯಾರ್ಥಿನಿ ಆತ್ಮಹತ್ಯೆ!