Publish Date: Fri, 21 Jan 2022 (11:34 IST)
Updated Date: Fri, 21 Jan 2022 (10:36 IST)
ಹೈದರಾಬಾದ್: ಪತಿಯ ರುಂಡ ಕತ್ತರಿಸಿ ಪತ್ನಿಯೊಬ್ಬಳು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
53 ವರ್ಷದ ಪತಿ ಮೃತಪಟ್ಟಿದ್ದು, ಪತ್ನಿಯನ್ನು ಬಂಧಿಸಲಾಗಿದೆ. ಕೌಟುಂಬಿಕ ಕಲಹದ ವೇಳೆ ಪತ್ನಿ ಪತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಳು. ಬಳಿಕ ಆತನ ತಲೆ ಕತ್ತರಿಸಿ ಠಾಣೆಗೆ ತಂದು ಶರಣಾಗಿದ್ದಾಳೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯಾವುದೋ ಕ್ಷುಲ್ಲುಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ದಂಪತಿಗೆ 20 ವರ್ಷದ ಮಗನಿದ್ದಾನೆ ಎಂದು ತಿಳಿದುಬಂದಿದೆ.