Select Your Language

Notifications

webdunia
webdunia
webdunia
webdunia

ಆಯುಷ್ಮಾನ್ ಭಾರತ್ ಯೋಜನೆ ಎಂದರೇನು, ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ವಿವರ

Ayushman card

Krishnaveni K

ನವದೆಹಲಿ , ಬುಧವಾರ, 17 ಜುಲೈ 2024 (11:50 IST)
Photo Credit: Instagram
ನವದೆಹಲಿ: ಬಡ ಕುಟುಂಬಕ್ಕೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ಸಿಗುವಂತಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಆಯುಷ್ಮಾನ್ ಭಾರತ್ ಕಾರ್ಡ್ ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ. ಇದರ ವಿವರಗಳು ಇಲ್ಲಿವೆ.

2018 ರಲ್ಲಿ ಮೋದಿ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿತ್ತು. ಅದರಂತೆ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಂಡು 5 ಲಕ್ಷ ರೂ.ವರೆಗಿನ ವೈದ್ಯಕೀಯ ವೆಚ್ಚವನ್ನು ಭರಿಸುವ ಇನ್ಶೂರೆನ್ಸ್ ಸೇವೆ ಇದಾಗಿದೆ. ಈಗಾಗಲೇ ಸುಮಾರು 50 ಕೋಟಿ ಜನರು ಇದರ ಲಾಭ ಪಡೆದಿದ್ದಾರೆ.

ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಬಳಸಿ ದೇಶದ ಯಾವುದೇ ಮೂಲೆಯಲ್ಲೂ ಕ್ಯಾಶ್ ಲೆಸ್ ವೈದ್ಯಕೀಯ ಸೇವೆ ಅಥವಾ ವೈದ್ಯಕೀಯ ಚಿಕಿತ್ಸೆ, ಪರೀಕ್ಷೆ, ದಾಖಲಾತಿ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಭರಿಸಬಹುದಾಗಿದೆ. ಕಡಿಮೆ ಆದಾಯ ಹೊಂದಿರುವ, ಆರ್ಥಿಕವಾಗಿ ದುರ್ಬಲವಾಗಿರುವ, ಕೂಲಿ ಕಾರ್ಮಿಕರು, ಮೀನುಗಾರರು, ನೇಕಾರರು, ಬಡಗಿಗಳು, ಕಮ್ಮಾರರು, ಕುಶಲ ಕರ್ಮಿಗಳು, ಸರ್ಕಾರದಿಂದ ಪೆನ್ಶನ್ ಪಡೆಯದವರು ಮುಂತಾದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವುದಕ್ಕೆ ಅನ್ವಯವಾಗುವುದಿಲ್ಲ?
ಈ ಯೋಜನೆಯಲ್ಲಿ ಒಪಿಡಿ, ಮಾದಕ ವ್ಯಸನ ಪುನಶ್ಚೃತನ, ಕಾಸ್ಮೆಟಿಕ್ ಸರ್ಜರಿ, ಫಲವಂತಿಕೆಯ ಚಿಕಿತ್ಸೆ, ಅಂಗಾಂಗ ಕಸಿ ಚಿಕಿತ್ಸೆಗಳ ವೆಚ್ಚ ಭರಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು
ಆಧಾರ್ ಕಾರ್ಡ್ ಬಯೋಮೆಟ್ರಿಕ್
ರೇಷನ್ ಕಾರ್ಡ್
ಫ್ಯಾಮಿಲಿ ಟ್ರೀ (ಪಿಪಿಡಿ ಐಡಿ)
ಇವಿಷ್ಟೂ ಅಗತ್ಯವಾಗಿ ಬೇಕಾಗುತ್ತದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು  https://pmjay.gov.in/ ಎಂಬ ವೆಬ್ ಸೈಟ್ ಗೆ ಲಾಗಿನ್ ಆಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಯಾವ ಹುದ್ದೆಗೆ, ಎಷ್ಟು ಮೀಸಲಾತಿ ಇಲ್ಲಿದೆ ವಿವರ