Publish Date: Thu, 22 Oct 2020 (11:35 IST)
Updated Date: Thu, 22 Oct 2020 (11:37 IST)
ಭೋಪಾಲ್: 8 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕರೆಂಟ್ ಶಾಕ್ ಕೊಟ್ಟು ಕೊಂದು, ಬಳಿಕ ಮದ್ಯದ ನಶೆಯಲ್ಲಿ ಆರೋಪಿ ಕೂಡ ನೇಣಿಗೆ ಶರಣಾದ ಘಟನೆ ಮಧ್ಯಪ್ರದೇಶದ ನೀಲಗಂಗಾ ಇಲಾಖೆಯ ನ್ಯೂ ಇಂದಿರಾನಗರದಲ್ಲಿ ನಡೆದಿದೆ.
ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮನೆ ಮಾಲೀಕನ ಬಾಲಕನನ್ನು 25 ವರ್ಷದ ಬಾಡಿಗೆದಾರನೊಬ್ಬ ತಿಂಡಿ ಕೊಡುವ ನೆಪದಲ್ಲಿ ಮನೆಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ನೀರು ಕಾಯಿಸುವ ವಿದ್ಯುತ್ ಸಾಧನದಿಂದ ಶಾಕ್ ಕೊಡಿಸಿ ಕೊಲೆ ಮಾಡಿದ್ದಾನೆ. ಬಾಲಕ ಕಾಣದಿದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಬಾಲಕನ ಶವ ಬಾಡಿಗೆದಾರನ ಮನೆಯಲ್ಲಿ ಪತ್ತೆಯಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಹುಡುಕಾಡಿದಾಗ ಆತ ಮದ್ಯ ಕುಡಿದು ನೇಣಿಗೆ ಶರಣಾಗಿದ್ದಾನೆ.