Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಬಂಧಿಯಾಗಿದ್ದ ಯುವತಿಗೆ ಐವರು ಪೊಲೀಸರು ಸೇರಿ ಮಾಡಿದ್ದೇನು ಗೊತ್ತಾ?

webdunia
ಭೋಪಾಲ್ , ಮಂಗಳವಾರ, 20 ಅಕ್ಟೋಬರ್ 2020 (07:56 IST)
ಭೋಪಾಲ್ : ಕೊಲೆ ಆರೋಪ ಹೊತ್ತಿರುವ 20 ವರ್ಷದ ಯುವತಿಯನ್ನು ಐವರು ಪೊಲೀಸರು ಸೇರಿ ಕೂಡಿಹಾಕಿ 5 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್ ಪಟ್ಟಣದಲ್ಲಿ ನಡೆದಿದೆ.

ಯುವತಿ ಕೊಲೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿ ಬಂಧಿಯಾಗಿದ್ದಳು. ಆಕೆಯ ಮೇಲೆ ಇಂತಹ ನೀಚ ಕೃತ್ಯ ಎಸಗಿದ ಪೊಲೀಸರು ಈ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲೆ ಪ್ರಕರಣದಲ್ಲಿ ತಂದೆಯನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆದರೆ ಜಿಲ್ಲಾ ನ್ಯಾಯಾಧೀಶರು, ಕಾನೂನು ಅಧಿಕಾರಿ ಮತ್ತು ಇಬ್ಬರು ವಕೀಲರನ್ನೊಳಗೊಂಡ ಕಾನೂನು ತಂಡವು ತಪಾಸಣೆಗಾಗಿ ಜೈಲಿಗೆ ಭೇಟಿ ನೀಡಿದಾಗ ಯುವತಿ ಈ ವಿಚಾರ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಜಿಲ್ಲಾ ನ್ಯಾಯಾಧೀಶರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುರೋಪ್ ನಲ್ಲಿ ಕೊರೊನಾ 2ನೇ ಅಲೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ