Publish Date: Mon, 19 Oct 2020 (11:05 IST)
Updated Date: Mon, 19 Oct 2020 (11:07 IST)
ಅಕ್ಕನ ಮೇಲೆ ತಮ್ಮನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.
ಅಕ್ಕ ತ್ರೀವೇಣಿಯು ತನ್ನ ಪ್ರಿಯಕರ ವಿನೋದ್ ನೊಂದಿಗೆ ಮನೆಮಂದಿಯ ವಿರೋಧದ ನಡುವೆ ಮದುವೆಯಾಗಿದ್ದರು.
ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದರು. ಪ್ರೀತಿಸಿ ಮದುವೆಯಾದ ಅಕ್ಕನ ಪಾಲಿಗೆ ತಮ್ಮನೇ ವಿಲನ್ ಆಗಿದ್ದಾನೆ.
ಕೊಪ್ಪಳದ ಕಾರಟಗಿಯಲ್ಲಿ ನೂತನ ದಂಪತಿ ಮೇಲೆ ನಡೆದ ಹಲ್ಲೆ ಘಟನೆಯಲ್ಲಿ ತ್ರಿವೇಣಿ ಸಾವನ್ನಪ್ಪಿದ್ದಾಳೆ. ಆಕೆಯ ಪತಿ ವಿನೋದ್ ಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಪೊಲೀಸರು ಕಾರ್ಯಾಚರಣೆ ನಡೆಸಿ ತ್ರಿವೇಣಿಯ ಸಹೋದರ ಅವಿನಾಶ್ ನನ್ನು ಬಂಧನ ಮಾಡಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.