Select Your Language

Notifications

webdunia
webdunia
webdunia
webdunia

ಮೂರು ವರ್ಷದ ಮಗನಿಗೆ ಪಾಪಿ ಮಲತಂದೆ ಮಾಡಿದ್ದಾದರೂ ಏನು ಗೊತ್ತಾ...?

ಮೂರು ವರ್ಷದ ಮಗನಿಗೆ ಪಾಪಿ ಮಲತಂದೆ ಮಾಡಿದ್ದಾದರೂ ಏನು ಗೊತ್ತಾ...?
ಮಧ್ಯಪ್ರದೇಶ , ಬುಧವಾರ, 24 ಜನವರಿ 2018 (15:48 IST)
ಮಧ್ಯಪ್ರದೇಶ : ಮೂರು ವರ್ಷದ ಮಗನಿಗೆ ಲೆಕ್ಕ ಎಣಿಸಲು ಬರಲಿಲ್ಲವೆಂದು ಮಲತಂದೆಯೊಬ್ಬ ನೇತುಹಾಕಿ ರಕ್ತಬರುವಂತೆ ಹೊಡೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್ ನಲ್ಲಿ ನಡೆದಿದೆ.


ಬಾಲಕನಿಗೆ 10 ರವರೆಗೆ ಸಂಖ್ಯೆ ಎಣಿಸಲು ಬರಲಿಲ್ಲವೆಂದು ಪಾಪಿ ತಂದೆ ಈ ಕೃತ್ಯವೆಸಗಿದ್ದಾನೆ. ಮಗುವನ್ನು ತಲೆಕೆಳಗಾಗಿ ನೇತುಹಾಕಿ ಚಪ್ಪಲಿ, ಬೆಲ್ಟ್ ನಿಂದ ಮನಬಂದಂತೆ ಹೊಡೆದಿದ್ದಾನೆ. ತಾಯಿ ಅದನ್ನು ತಡೆಯಲು ಬಂದಾಗ ಆಕೆಯನ್ನು ಹೊಡೆದಿದ್ದಾನೆ. ನೆರೆಹೊರೆಯವರು ಕೂಡ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಸ್ಥಳೀಯರು ಕೂಡಲೆ ಪೊಲೀಸರಿಗೆ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪಾಪಿ ತಂದೆ ಪರಾರಿಯಾಗಿದ್ದಾನೆ. ನಂತರ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಲೆ, ಕಣ್ಣು, ತುಟಿ ಹಾಗು ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತವರು ನಾಡಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ!