Publish Date: Sat, 13 Mar 2021 (06:54 IST)
Updated Date: Sat, 13 Mar 2021 (07:49 IST)
ತಿರುಚ್ಚಿ : ಬುದ್ದಿಮಂದವಿರುವ 24 ವರ್ಷದ ಗರ್ಭಿಣಿಯ ಮೇಲೆ ಇಬ್ಬರು ಸಂಬಂಧಿಕರು ಮಾನಭಂಗ ಎಸಗಿದ ಘಟನೆ ತಮಿಳುನಾಡಿನ ಪುಡುಕೋಟೈನಲ್ಲಿ ನಡೆದಿದೆ.
ಮಹಿಳೆಯನ್ನು ಪತಿ ಮತ್ತು ಮನೆಯವರು ಇಲ್ಲದ ವೇಳೆ ಸಂಬಂಧಿಕರ ಮನೆಗೆ ಬಂದ ಮಹಿಳೆಯ ಮೇಲೆ ಇಬ್ಬರು ಪುರುಷರು ಮಾನಭಂಗ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಮಹಿಳೆಯ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಮನೆಯವರು ವಿಚಾರಿಸಿದಾಗ ಆಕೆ ಸತ್ಯಾಂಶ ತಿಳಿಸಿದ್ದಾಳೆ. ಹೀಗಾಗಿ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.