Publish Date: Tue, 09 Mar 2021 (07:10 IST)
Updated Date: Tue, 09 Mar 2021 (07:11 IST)
ಸೂರತ್ : ಗುಜರಾತ್ ನ ಲಿಂಬಾಯತ್ ಪ್ರದೇಶದಲ್ಲಿ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ಅವಳ ಸಂಬಂಧಿಯೊಬ್ಬ ಪತಿ ಪದೇ ಪದೇ ಮಾನಭಂಗ ಎಸಗಿದ ಘಟನೆ ನಡೆದಿದೆ.
ಸಂಬಂಧಿಯೊಬ್ಬ ಸಂತ್ರಸ್ತೆಗೆ ಉಡುಗೊರೆ ನೀಡುವ ಆಮಿಷಯೊಡ್ಡಿ, ಮದುವೆಯಾಗಿ ಭರವಸೆ ನೀಡಿ ಆಕೆಯ ಮೇಲೆ ಪದೇ ಪದೇ ಮಾನಭಂಗ ಎಸಗಿದ್ದಾನೆ, ಆಕೆ ಗರ್ಭಿಣಿ ಎಂದು ತಿಳಿದಾಗ ಗರ್ಭಪಾತ ಮಾಡಿಸಿದ್ದಾನೆ.
ಈ ಬಗ್ಗೆ ಸಂತ್ರಸ್ತೆ ತನ್ನ ಮನೆಯವರಿಗೆ ತಿಳಿಸಿದ ಹಿನ್ನಲೆಯಲ್ಲಿ ಮನೆಯವರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.