Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಮುಂಗಾರು ವಿಳಂಬವಾದ ಕಾರಣವಾದ್ರು ಏನು?

ಕೇರಳದಲ್ಲಿ ಮುಂಗಾರು ವಿಳಂಬವಾದ  ಕಾರಣವಾದ್ರು ಏನು?
ತಿರುವನಂತಪುರಂ , ಶುಕ್ರವಾರ, 27 ಮೇ 2022 (08:16 IST)
ತಿರುವನಂತಪುರಂ : ಎಲ್ ನಿನೋ ಎಫೆಕ್ಟ್ ಕಾರಣ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶ ನಾಲ್ಕು ದಿನ ವಿಳಂಬವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ ಮೊದಲ ವಾರದಲ್ಲಿ ಕೇರಳ, ಕರ್ನಾಟಕವನ್ನು ಮುಂಗಾರು ಮಾರುತಗಳು ಪ್ರವೇಶ ಮಾಡಬಹುದು ಎಂದಿದೆ. ಈ ಮೊದಲು ಮೇ 27ಕ್ಕೆ ಮುಂಗಾರು ಮಾರುಗಳು ಕೇರಳ ಪ್ರವೇಶಿಸಬಹುದು ಎಂದು ಐಎಂಡಿ ತಿಳಿಸಿತ್ತು.

ಈಗಾಗಲೇ ಅಂಡಮಾನ್ ದ್ವೀಪಗಳನ್ನು ತಲುಪಿರುವ ಮುಂಗಾರು ಮಾರುತಗಳು ಈಗ ಅರಬ್ಬಿ ಸಮುದ್ರದ ಕಡೆ ಚಲಿಸ್ತಿವೆ. ಮುಂಜಾಗ್ರತಾ ಕ್ರಮವಾಗಿ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಮೇ 29ರವರೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.

ದೇಶದ ರೈತರಿಗೆ ಖುಷಿ ಸುದ್ದಿ ಹೊರಬಿದ್ದಿದ್ದು, ಈ ವರ್ಷ ದೇಶದಲ್ಲಿ ಉತ್ತಮ ಮಳೆ ಅಂದ್ರೆ ವಾಡಿಕೆಯಲ್ಲಿ ಶೇಕಡಾ 99ರಷ್ಟು ಆಗಲಿದೆ. ಗುಜರಾತ್, ಪಂಜಾಬ್ ಸೇರಿ ಆ ಭಾಗದ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚಿ ಮಳೆ ಆಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಇತ್ತ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬಂತು. ಕೇರಳ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಳೆಯ ಸಿಂಚನವಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾವಾಟಿಕೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು