Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಆ್ಯಪಲ್ ಸ್ಟೋರ್ನ ವಿಶೇಷತೆಗಳೇನು?

ಭಾರತದಲ್ಲಿ ಆ್ಯಪಲ್ ಸ್ಟೋರ್ನ ವಿಶೇಷತೆಗಳೇನು?
ಮುಂಬೈ , ಮಂಗಳವಾರ, 18 ಏಪ್ರಿಲ್ 2023 (11:15 IST)
ಜಿಯೋ ವರ್ಲ್ಡ್ ಡ್ರೈವ್ ಮಾಲ್ನ ಮೂಲೆಯಲ್ಲಿ ಬೃಹತ್ 2 ಅಂತಸ್ತಿನ ಗಾಜಿನಿಂದ ಮಾಡಲಾದ ಸ್ಟೋರ್ ಇದಾಗಿದೆ. ಭಾರತದಲ್ಲಿ ಆನ್ಲೈನ್ ಸ್ಟೋರ್ಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಆ್ಯಪಲ್ ಉತ್ಪನ್ನಗಳು ಇಲ್ಲಿ ದೊರೆಯಲಿದೆ.

ಮ್ಯಾಕ್ಬುಕ್, ಐಫೋನ್, ಐಪ್ಯಾಡ್, ವಾಚ್ಗಳನ್ನು ಹೊರತುಪಡಿಸಿ ಸ್ಟೋರ್ ಆ್ಯಪಲ್ ಆರ್ಕೇಡ್, ಆ್ಯಪಲ್ ಹೋಮ್ಪಾಡ್, ಆ್ಯಪಲ್ ಮ್ಯೂಸಿಕ್ ಹಾಗೂ ಆ್ಯಪಲ್ ಟಿವಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮುಂಬೈ ಆ್ಯಪಲ್ ಸ್ಟೋರ್ನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ 100 ಸಿಬ್ಬಂದಿಯಿದ್ದಾರೆ.

ಅದರಲ್ಲಿ ಶೇ.50 ರಷ್ಟು ಸಿಬ್ಬಂದಿ ಮಹಿಳೆಯರೇ ಇದ್ದಾರೆ. ಮುಖ್ಯವಾಗಿ ಕಂಪನಿ ಸ್ಥಳೀಯ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಭಾರತದ 18 ಭಾಷೆಗಳನ್ನು ಒಳಗೊಂಡಂತೆ 25 ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ. 

ಇದೀಗ ಅಮೆರಿಕ ಮೂಲದ ಆ್ಯಪಲ್ ಕಂಪನಿಯ ಮೊದಲ ಮಳಿಗೆ ಭಾರತದಲ್ಲಿ ಏಪ್ರಿಲ್ 18ರಂದು ಮುಂಬೈನಲ್ಲಿ ಪ್ರಾರಂಭವಾಗಿದ್ದು, 2ನೇ ಮಳಿಗೆ ಏಪ್ರಿಲ್ 20ರಂದು ದೆಹಲಿಯಲ್ಲಿ ಆರಂಭಗೊಳ್ಳಲಿದೆ. ಈ ಎರಡೂ ಮಳಿಗೆಗಳ ಉದ್ಘಾಟನೆಗೆ ಸಂಸ್ಥೆಯ ಸಿಇಒ ಟಿಮ್ ಕುಕ್ ಸ್ವತಃ ಭಾರತಕ್ಕೆ ಆಗಮಿಸಿದ್ದಾರೆ.

ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಹಾಗೂ ಸೇವೆಯನ್ನು ನೀಡುತ್ತಿದ್ದರೂ ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತ ಮಳಿಗೆ ದೇಶದಲ್ಲಿ ಹೊಂದರಲಿಲ್ಲ. ಇದೀಗ ಭಾರತದಲ್ಲಿ ಪ್ರಾರಂಭವಾಗುತ್ತಿರುವ ಆ್ಯಪಲ್ ಸ್ಟೋರ್ಗಳಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಿಜೆಪಿಯಿಂದ ಗುಜರಾತ್ ದಾಖಲೆ ಬ್ರೇಕ್