Select Your Language

Notifications

webdunia
webdunia
webdunia
webdunia

ವಯನಾಡು ದುರಂತ: ಶೋಧ ಕಾರ್ಯ ಅಂತಿಮ ಘಟ್ಟ ತಲುಪಿದರು ಇನ್ನೂ 250 ಮಂದಿ ನಾಪತ್ತೆ

ವಯನಾಡು ದುರಂತ: ಶೋಧ ಕಾರ್ಯ ಅಂತಿಮ ಘಟ್ಟ ತಲುಪಿದರು ಇನ್ನೂ 250 ಮಂದಿ ನಾಪತ್ತೆ

Sampriya

ಕೇರಳ , ಶನಿವಾರ, 3 ಆಗಸ್ಟ್ 2024 (19:11 IST)
Photo Courtesy X
ಕೇರಳ: ವಯನಾಡಿನಲ್ಲಿ ಸಂಭವಿಸಿದ ಭೀಕರ  ಭೂಕುಸಿತದಲ್ಲಿ ರಕ್ಷಣೆ ಮತ್ತು ಶೋಧ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಇನ್ನೂ 250 ಮಂದಿ ನಾಪತ್ತೆಯಾಗಿದ್ದಾರೆ.

ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯದಲ್ಲಿ ಬದುಕುಳಿದವರ ರಕ್ಷಣೆಗೆ ಮತ್ತು ಅವಶೇಷಗಳಡಿ ಹೂತು ಹೋಗಿರುವ ದೇಹಗಳನ್ನು ಪತ್ತೆ ಹಚ್ಚಲು  ಸುಧಾರಿತ ತಾಂತ್ರಿಕ ಗ್ಯಾಜೆಟ್‌ಗಳು ಮತ್ತು ಶ್ವಾನಗಳನ್ನು ಬಳಸಿ ಶೋಧ ಕಾರ್ಯ ನಡೆಸಲಾಯಿತು.

ಈ ಭೀಕರ ಭೂಕುಸಿತದಲ್ಲಿ 350 ಮಂದಿ ಸಾವನ್ನಪ್ಪಿದ್ದು, ಇನ್ನೂ 250ಮಂದಿ ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ವಯನಾಡಿನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇನ್ನೂ ಚಾಲಿಯಾರ್ ನದಿಯಿಂದ ಪತ್ತೆಯಾದ ಮೃತ ದೇಹಗಳು ಮತ್ತು ಕೆಲ ಭಾಗಗಳನ್ನು ಗುರುತಿಸಲು ಕಷ್ಟವಾಗುತ್ತಿದೆ ಎಂದರು. .

ಕೆ -9 ಸ್ಕ್ವಾಡ್‌ಗಳು ಮತ್ತು ತಮಿಳುನಾಡು ವೈದ್ಯಕೀಯ ತಂಡವೂ ಭಾಗವಹಿಸುತ್ತಿದೆ, ಹ್ಯೂಮನ್ ರೆಸ್ಕ್ಯೂ ರಾಡಾರ್ ಮತ್ತು ಡ್ರೋನ್ ಆಧಾರಿತ ರಾಡಾರ್‌ನಂತಹ ಸುಧಾರಿತ ಸಾಧನಗಳನ್ನು ಸಹ ಬಳಸಲಾಗುತ್ತಿದೆ ಎಂದು ವಿಜಯನ್ ಹೇಳಿದರು.

ಇದುವರೆಗೆ 341 ಶವಪರೀಕ್ಷೆ ಪೂರ್ಣಗೊಂಡಿದ್ದು, 148 ಮೃತದೇಹಗಳನ್ನು ಗುರುತಿಸಿ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 67 ಶವಗಳ ಗುರುತು ಪತ್ತೆಯಾಗದಿರುವುದರಿಂದ ಪಂಚಾಯಿತಿಗಳು ಅಂತಿಮ ವಿಧಿವಿಧಾನ ನಡೆಸಲಿವೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಶಿರಾಡಿ ಘಾಟ್ ಗುಡ್ಡ ಕುಸಿತಕ್ಕೆ ಕಾರಣ ತಿಳಿದು ಗರಂ ಸಿಎಂ ಸಿದ್ದರಾಮಯ್ಯ