Select Your Language

Notifications

webdunia
webdunia
webdunia
webdunia

ವಯನಾಡು ಸಂತ್ರಸ್ತರ ನೆರವಿಗೆ ನಿಂತ ಕರ್ನಾಟಕ ಸರ್ಕಾರ: 100 ಮನೆ ನಿರ್ಮಾಣದ ಭರವಸೆ ಕೊಟ್ಟ ಸಿಎಂ

ವಯನಾಡು ಸಂತ್ರಸ್ತರ ನೆರವಿಗೆ ನಿಂತ ಕರ್ನಾಟಕ ಸರ್ಕಾರ: 100 ಮನೆ ನಿರ್ಮಾಣದ ಭರವಸೆ ಕೊಟ್ಟ ಸಿಎಂ

Sampriya

ಬೆಂಗಳೂರು , ಶನಿವಾರ, 3 ಆಗಸ್ಟ್ 2024 (15:31 IST)
ಬೆಂಗಳೂರು: ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ದುರಂತದ ವೇಳೆ ಕರ್ನಾಟಕ ಸರ್ಕಾರ ಕೇರಳದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ.  ನಾನು ಸಿಎಂ ಪಿಣರಾಯಿ ವಿಜಯನ್ ಅವರುಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾನೆ. ಇದೀಗ ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಕರ್ನಾಟಕ ಸರ್ಕಾರ 100 ಮನೆಗಳನ್ನು ನಿರ್ಮಿಸುವ ಭರವಸೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.


ಕೇರಳದ ವಯನಾಡಿನಲ್ಲಿ ಮಂಗಳವಾರ ಮುಂಜಾನೆ ಕೇರಳದ ವಯನಾಡಿನಲ್ಲಿ ಭೀಕರ ಎರಡು ಭೂಕುಸಿತ ಸಂಭವಿಸಿ, 210 ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಅಪಾರ ಪ್ರಾಣ ಹಾನಿಯೊಂದಿಗೆ ಮನೆ ಹಾನಿಯಾಗಿದ್ದು, ವಯನಾಡಿನ ಚಿತ್ರಣವೇ ಬದಲಾಗಿದೆ. ಇದೀಗ ವಯನಾಡು ಸಂತ್ರಸ್ತರ ನೆರವಿಗೆ ಸಿನಿಮಾ ತಾರೆಯರು ಕೈಜೋಡಿಸಿದ್ದಾರೆ. ಎನ್‌ಎಸ್‌ಎಸ್‌ ಕೂಡ ಸಂತ್ರಸ್ತರಿಗೆ ತಾವೇ ಸ್ವತಃ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅದಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡು ಭೇಟಿ ವೇಳೆ ಸಂತ್ರಸ್ತರಿಗೆ ಕಾಂಗ್ರೆಸ್‌ನಿಂದ 100ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆ.

ಇದೀಗ ಇದರ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಸಂತ್ರಸ್ತರಿಗೆ 100 ಮನೆ ನಿರ್ಮಾಣ ಮಾಡಲು ಕೈಜೋಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ವಿರುದ್ಧ ಧ್ವನಿ ಎತ್ತುತ್ತಿರುವ ಸಿದ್ದರಾಮಯ್ಯ ಮುಗಿಸಲು ಬಿಜೆಪಿ ಹುನ್ನಾರ: ದಿನೇಶ್ ಗುಂಡೂರಾವ್