Select Your Language

Notifications

webdunia
webdunia
webdunia
webdunia

ಕರ್ನಾಟಕ ನೀಡಿದ 15 ಲಕ್ಷ ಪರಿಹಾರ ನಿರಾಕರಿಸಿದ ವಯನಾಡು ಆನೆ ದಾಳಿ ಸಂತ್ರಸ್ತ ಕುಟುಂಬ

Wayanad elephant attack

Krishnaveni K

ಬೆಂಗಳೂರು , ಮಂಗಳವಾರ, 27 ಫೆಬ್ರವರಿ 2024 (14:57 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಕೇರಳದ ವಯನಾಡಿನ ಆನೆ ದಾಳಿ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಈಗ ವಯನಾಡಿನ ಸಂತ್ರಸ್ತ ಕುಟುಂಬ ಕರ್ನಾಟಕದ ಪರಿಹಾರ ಹಣವನ್ನು ತಿರಸ್ಕರಿಸಿದೆ.

ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡಿನಲ್ಲಿ ಕರ್ನಾಟಕ ಮೂಲದ ಆನೆಯ ದಾಳಿಗೆ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಘಟನೆ ನಡೆದ ಬಳಿಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ರದ್ದುಗೊಳಿಸಿ ವಯನಾಡಿಗೆ ತೆರಳಿ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು.

ಅದಾದ ಬಳಿಕ ರಾಹುಲ್ ಸೂಚನೆಯಂತೆ ಕರ್ನಾಟಕ ಸರ್ಕಾರ ಕೇರಳದಲ್ಲಿ ಮೃತಪಟ್ಟ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ ನೀಡಿತ್ತು. ಇದು ಬಿಜೆಪಿ ಸೇರಿದಂತೆ ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ನಮ್ಮ ತೆರಿಗೆ ಹಣವನ್ನು ನೆರೆ ರಾಜ್ಯದ ಸಂತ್ರಸ್ತರಿಗೆ ನೀಡುವ ಅಗತ್ಯವೇನಿತ್ತು. ಸರ್ಕಾರ ರಾಹುಲ್ ಗಾಂಧಿ ಹೇಳಿದ್ದಾರೆಂದು ನಮ್ಮ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು.

ಇದಕ್ಕೆ ಕಾಂಗ್ರೆಸ್ ನಾಯಕರು ಸಮರ್ಥನೆಯನ್ನೂ ಕೊಟ್ಟಿದ್ದರು. ಆದರೆ ಈಗ ಸಂತ್ರಸ್ತ ಕುಟುಂಬವೇ ಕರ್ನಾಟಕ ನೀಡಿದ ಪರಿಹಾರವನ್ನು ತಿರಸ್ಕರಿಸಿದೆ. ಆದರೆ ಈಗ ಕರ್ನಾಟಕ ಪರಿಹಾರ ನೀಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಸಂತ್ರಸ್ತ ಕುಟುಂಬದವರೇ ಪರಿಹಾರ ಸ್ವೀಕರಿಸದೇ ಇರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಗನಯಾನ ಮಿಷನ್ ಗೆ ಆಯ್ಕೆಯಾದ ನಾಲ್ವರು ಯಾತ್ರಿಗಳನ್ನು ಬಹಿರಂಗಪಡಿಸಿದ ಮೋದಿ