ನೋಯ್ಡಾ: ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸನ್ ರೂಫ್ ಕಾರಿನ ಮೇಲೆ ರೊಮ್ಯಾನ್ಸ್ ಮಾಡಿದ್ದಕ್ಕೆ ಯುವ ಜೋಡಿಯೊಂದು ತಕ್ಕ ಬೆಲೆ ತೆತ್ತಿತ್ತು. ಇದೀಗ ಅಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅವರಿಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?
ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇಯಲ್ಲಿ ಯುವ ಜೋಡಿಯೊಂದು ರೊಮ್ಯಾನ್ಸ್ ಮಾಡುವ ರೀತಿ ವಿಚಿತ್ರ ಭಂಗಿಯಲ್ಲಿ ಬೈಕ್ ನಲ್ಲಿ ತೆರಳುವ ದೃಶ್ಯವೊಂದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು.
ಯುವಕ ಬೈಕ್ ಚಾಲನೆ ಮಾಡುತ್ತಿದ್ದರೆ ಆತನಿಗೆ ಅಭಿಮುಖವಾಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕಾಲು ಮೇಲೆತ್ತಿ ಕೂತಿದ್ದ ಮಹಿಳೆ ಯುವಕನ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದಳು. ನಡು ರಸ್ತೆಯಲ್ಲಿ ಯುವ ಜೋಡಿಯ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವಿಡಿಯೋ ಗಮನಿಸಿದ ನೋಯ್ಡಾ ಸಂಚಾರಿ ಪೊಲೀಸರು ಯುವ ಜೋಡಿಗೆ 53,500 ರೂ. ದಂಡ ವಿಧಿಸಿದೆ. ಹೆದ್ದಾರಿಯಲ್ಲಿ ರೊಮ್ಯಾನ್ಸ್ ಮಾಡಿದ ತಪ್ಪಿಗೆ ಯುವ ಜೋಡಿಗೆ ಭಾರೀ ದಂಡ ತೆರಬೇಕಾಗಿ ಬಂದಿದೆ.