Publish Date: Fri, 24 Apr 2026 (15:47 IST)
Updated Date: Fri, 24 Apr 2026 (15:49 IST)
ಬೇಸಿಗೆಯ ಬೇಗೆಗೆ ಶೆಖೆಯಾಗುತ್ತದೆಂದು ಟೆರೇಸ್ ಮೇಲೆ ಮಲಗುವುದು ಎಷ್ಟು ಅಪಾಯಕಾರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋನೇ ಸಾಕ್ಷಿ.
ಬೇಸಿಗೆ ಬಂದಾಗ ಮನೆಯೊಳಗೆ ಮಲಗಲು ಶೆಖೆಯಾಗುತ್ತದೆಂದು ಕೆಲವರು ಹೊರಗೆ ಅಥವಾ ಟೆರೇಸ್ ಮೇಲೆ ಮಲಗುತ್ತಾರೆ. ಕೆಲವರು ಬಾಗಿಲು ತೆರೆದು ಮಲಗಿ ಕಳ್ಳತನವಾದ ಘಟನೆಗಳೂ ಸಾಕಷ್ಟು ನಡೆದಿವೆ. ಇಂತಹದ್ದೇ ಒಂದು ಅಪಾಯಕಾರೀ ವಿಡಿಯೋ ಇದಾಗಿದೆ.
ಓರ್ವ ವ್ಯಕ್ತಿ ಬೇಸಿಗೆಯ ಬೇಗೆ ಎಂದು ಟೆರೇಸ್ ಮಲಗಿ ಹಾಯಾಗಿ ನಿದ್ರೆ ಮಾಡುತ್ತಿರುತ್ತಾರೆ. ಆದರೆ ಈ ವೇಳೆ ಬೃಹತ್ ಗಾತ್ರದ ಹಾವೊಂದು ಮೈಮೇಲೆ ಬರುತ್ತದೆ. ಗಾಢ ನಿದ್ರೆಯಲ್ಲಿರುವ ವ್ಯಕ್ತಿಗೆ ಇದು ಗೊತ್ತೇ ಆಗುವುದಿಲ್ಲ.
ಆದರೆ ನಂತರ ಅದು ಕುತ್ತಿಗೆ ಸುತ್ತ ಸುತ್ತಿಕೊಂಡು ಮುಖದತ್ತ ಬಂದಾಗ ಎಚ್ಚರವಾಗಿ ಬಿಡುತ್ತದೆ. ಆದರೆ ಅಷ್ಟರಲ್ಲಿ ಹಾವು ಮೈಮೇಲೆ ಸುತ್ತಿಕೊಂಡಿರುತ್ತದೆ. ಬೇಸಿಗೆಯಾಗಿರುವುದರಿಂದ ತಂಪು ಪ್ರದೇಶವನ್ನು ಅರಸಿಕೊಂಡು ಹಾವುಗಳೂ ಇಂತಹ ಪ್ರದೇಶಗಳಿಗೆ ಬಂದುಬಿಡುತ್ತವೆ. ಹೀಗಾಗಿ ಹೊರಗೆ ಮಲಗುವ ಮುನ್ನ ಎಚ್ಚರವಿರಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ