Publish Date: Thu, 23 Apr 2026 (10:42 IST)
Updated Date: Thu, 23 Apr 2026 (10:46 IST)
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಮತ ಚಲಾಯಿಸಿದ್ದು ಅವರು ಮತದಾನ ಮಾಡುವಾಗ ಹಿಂದೆ, ಮುಂದೆಯೇ ಜನರಿದ್ದರು.
ಇಂದು ತಮಿಳುನಾಡು ವಿಧಾನಸಭೆ ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ. ಚೆನ್ನೈನಲ್ಲಿ ಇಂದು ಬೆಳಿಗ್ಗೆಯೇ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ರಜನೀಕಾಂತ್ ಮತ ಚಲಾಯಿಸುತ್ತಾರೆ ಎಂದು ತಿಳಿದು ಸಾಕಷ್ಟು ಮಾಧ್ಯಮ ಪ್ರತಿನಿಧಿಗಳೂ ಕ್ಯಾಮರಾ ಸಮೇತ ಅಲ್ಲಿದ್ದರು.
ಇನ್ನು, ಮತಗಟ್ಟೆಯ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳೂ ನೆರೆದಿದ್ದರು. ರಜನೀಕಾಂತ್ ಮತ ಯಂತ್ರದ ಮುಂದೆ ನಿಂತು ಮತ ಚಲಾಯಿಸುವಾಗ ಮಾಧ್ಯಮಗಳು ಪಕ್ಕದಲ್ಲೇ ನಿಂತು ಫೋಟೋ, ವಿಡಿಯೋ ತೆಗೆಯಲು ನೂಕುನುಗ್ಗಲು ನಡೆಸಿದ್ದರು.
ಇದು ಒಂದೆಡೆಯಾದರೆ ರಜನಿ ಪಕ್ಕದಲ್ಲೇ ಮಹಿಳೆಯೊಬ್ಬರು ನಿಂತಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಗೌಪ್ಯ ಮತದಾನ ಹೇಗಾಗುತ್ತದೆ? ಇಷ್ಟೊಂದು ಜನ ಸೇರಲು ಅವಕಾಶ ನೀಡಿದ್ದು ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ