Publish Date: Thu, 07 May 2026 (15:35 IST)
Updated Date: Thu, 07 May 2026 (15:49 IST)
ಗೂಡ್ಸ್ ರೈಲೊಂದು ಸೇತುವೆ ಮೇಲಿಂದ ಹಾದು ಹೋಗುವಾಗ ದನವೊಂದು ಎದುರಾಗಿದ್ದು ಆ ಸಂದರ್ಭದಲ್ಲಿ ಲೋಕೋ ಪೈಲೆಟ್ ಮಾಡಿದ ಕೆಲಸವೇನು ತಪ್ಪದೇ ಈ ವಿಡಿಯೋ ನೋಡಿ.
ನಮ್ಮ ದೇಶದಲ್ಲಿ ರೈಲು ಹಳಿಯಲ್ಲಿ ಸಿಲುಕಿ ಎಷ್ಟೋ ಜನ ಅಪಘಾತದಲ್ಲಿ ಜೀವವನ್ನೇ ಕಳೆದುಕೊಳ್ಳುತ್ತಾರೆ. ಚಲಿಸುತ್ತಿರುವ ರೈಲನ್ನು ಅಷ್ಟು ಬೇಗ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಎಷ್ಟೋ ಜೀವಗಳು ಬಲಿಯಾಗುತ್ತವೆ. ಆದರೆ ಈ ಲೋಕೋ ಪೈಲೆಟ್ ಗೋವಿನ ಜೀವಕ್ಕೆ ಬೆಲೆ ನೀಡಿದ ರೀತಿ ಮಾತ್ರ ಮೆಚ್ಚುವಂತದ್ದು.
ಸೇತುವೆಯೊಂದರ ಹಳಿಯ ಮೇಲೆ ದನವೊಂದು ಮಾಮೂಲಾಗಿ ನಡೆದುಕೊಂಡು ಹೋಗುತ್ತಿರುತ್ತದೆ. ಈ ವೇಳೆ ಗೂಡ್ಸ್ ರೈಲೊಂದು ಬರುತ್ತದೆ. ರೈಲು ನೋಡಿ ದನ ಗಾಬರಿಯಾಗಿ ಓಡಲು ನೋಡುತ್ತದೆ. ಆದರೆ ಅದಕ್ಕೆ ಬೇಗ ಓಡಲು ಸಾಧ್ಯವಾಗುವುದಿಲ್ಲ.
ಇನ್ನೇನು ದನ ಜೀವ ಕಳೆದುಕೊಳ್ಳಬಹುದು ಎಂದುಕೊಳ್ಳುವಾಗ ಲೋಕೋ ಪೈಲೆಟ್ ರೈಲು ನಿಧಾನಗೊಳಿಸಿ ಗೋವಿಗೆ ಯಾವುದೇ ತೊಂದರೆಯಾಗದಂತೆ ರೈಲು ನಿಲ್ಲಿಸಿಯೇ ಬಿಡುತ್ತಾರೆ. ಕೆಲವು ಕ್ಷಣ ರೈಲು ನಿಲ್ಲಿಸಿ ದನ ಅಲ್ಲಿಂದ ಸುರಕ್ಷಿತ ಜಾಗಕ್ಕೆ ಹೋದ ಬಳಿಕವೇ ರೈಲನ್ನು ಮುಂದೆ ಚಲಾಯಿಸುತ್ತಾರೆ. ಈ ವಿಡಿಯೋಗೆ ನೆಟ್ಟಿಗರು ಶಹಬ್ಬಾಷ್ ಹೇಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ