Daily Horoscope

Select Your Language

Notifications

webdunia
webdunia
webdunia
webdunia

ರೈಲಿನಿಂದ ಬಿದ್ದ ಮಗು, ಚೈನ್ ಎಳೆದರೂ ನಿಲ್ಲಲಿಲ್ಲ: ಕರುಳು ಕಿತ್ತು ಬರುವಂತೆ ಅತ್ತ ತಾಯಿ Video

Viral video of train
Photo Credit: X
ಕೋಲ್ಕತ್ತಾ: ಚಲಿಸುತ್ತಿರುವ ರೈಲಿನಿಂದ ಮಗು ಬಿದ್ದಿದ್ದು ರೈಲು ನಿಲ್ಲಿಸುವಂತೆ ಚೈನ್ ಎಳೆದರೂ ಪ್ರಯೋಜನವಾಗಲಿಲ್ಲ. ಮಗುವನ್ನು ಕಳೆದುಕೊಂಡ ತಾಯಿ ಕರುಳು ಕಿತ್ತುಬರುವಂತೆ ನೋವಿನಿಂದ ಅಳುವ ದೃಶ್ಯ ನೋಡುಗರ ಕಣ್ಣಂಚು ಒದ್ದೆ ಮಾಡುವಂತಿದೆ.

ಈ ಘಟನೆ ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲ್ವೇ ಪ್ರಯಾಣದ ವೇಳೆ ನಡೆದಿದೆ. ರೈಲುಗಳಲ್ಲಿ ತುರ್ತು ಸಂದರ್ಭದಲ್ಲಿ ರೈಲು ನಿಲ್ಲಿಸಲು ಚೈನ್ ಇರುತ್ತದೆ. ಆದರೆ ಇದು ಅಗತ್ಯ ಸಂದರ್ಭದಲ್ಲೇ ಪ್ರಯೋಜನಕ್ಕೆ ಬಾರದೇ ಇದ್ದರೆ ಇದ್ದೂ ಏನು ಪ್ರಯೋಜನ?

ಇಲ್ಲಿ ಆಗಿದ್ದೂ ಇದೆ. ಚಲಿಸುತ್ತಿದ್ದ ರೈಲಿನಿಂದ ಕೈ ಜಾರಿ ಮಗು ಕೆಳಕ್ಕೆ ಬೀಳುತ್ತದೆ. ತಾಯಿ ತಕ್ಷಣವೇ ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ. ಅಲ್ಲಿದ್ದ ಬೇರೆ ಪ್ರಯಾಣಿಕರೂ ಇದೇ ಪ್ರಯತ್ನ ಮಾಡುತ್ತಾರೆ. ಆದರೆ ಏನೇ ಮಾಡಿದರೂ ರೈಲು ನಿಲ್ಲುವುದಿಲ್ಲ.

ಮಗು ಕಳೆದುಕೊಂಡ ತಾಯಿ ನೋವಿನಲ್ಲಿ ಅಳುತ್ತಿರುತ್ತಾಳೆ. ಬಳಿಕ ಅಲ್ಲಿದ್ದ ಯುವಕನೊಬ್ಬ ಆರ್ ಪಿಎಫ್ ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಇದೀಗ ಸ್ಥಳೀಯ ಪೊಲೀಸರು ಮತ್ತು ರೈಲ್ವೇ ಪೊಲೀಸರು ಮಗುವಿನ ಹುಡುಕಾಟಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ.

pic.twitter.com/O98tt4jxDA

 

— Kavish aziz (@azizkavish) April 26, 2026

Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಕೊಡಲು ಬೇಡಿಕೆ