Select Your Language

Notifications

webdunia
webdunia
webdunia
webdunia

ರಾಜಕೀಯ ಲಾಭಕ್ಕಾಗಿ ಹಿಂಸಾಚಾರಕ್ಕೆ ಸಿಎಂ ಖಟ್ಟರ್ ಅವಕಾಶ: ಹೈಕೋರ್ಟ್ ತರಾಟೆ

ರಾಜಕೀಯ ಲಾಭಕ್ಕಾಗಿ ಹಿಂಸಾಚಾರಕ್ಕೆ ಸಿಎಂ ಖಟ್ಟರ್ ಅವಕಾಶ: ಹೈಕೋರ್ಟ್ ತರಾಟೆ
ಚಂಡೀಗಢ್: , ಶನಿವಾರ, 26 ಆಗಸ್ಟ್ 2017 (14:11 IST)
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರಾಜಕೀಯ ಲಾಭಕ್ಕಾಗಿ ರಾಜ್ಯವನ್ನು ಬೆಂಕಿ ಹಚ್ಚಲು ರಾಮ್ ರಹೀಮ್ ಬೆಂಬಲಿಗರಿಗೆ ಅವಕಾಶ ನೀಡಿದೆ ಎಂದು ಪಂಜಾಬ್ ಮತ್ತು ಹರಿಯಾಣಾ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಆರೋಪಿ ಡೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಬೆಂಬಲಿಗರಿಂದ ಹರಿಯಾಣಾದಾದ್ಯಂತ  ಹಿಂಸಾತ್ಮಕ ಘರ್ಷಣೆಗೆ ಕಾರಣವಾದ ನಂತರ, ಹೈಕೋರ್ಟ್, ಸರಕಾರದ ವಿರುದ್ಧ ಕಿಡಿಕಾರಿದೆ. 
 
ಹರಿಯಾಣದಲ್ಲಿ ಸುಮಾರು 30 ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 250 ಮಂದಿ ಗಾಯಗೊಂಡಿದ್ದಾರೆ. ಸೇನೆ, ಪೊಲೀಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಸಿಬ್ಬಂದಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, ಡೇರಾ ಮುಖ್ಯಸ್ಥ ನಿವಾಸಕ್ಕೆ ಮುತ್ತಿಗೆ ಹಾಕಿದೆ. 
 
ಮನೋಹರ್ ಲಾಲ್ ಖಟ್ಟರ್ ಗುರ್ಮೆತ್ ರಾಮ್ ರಹೀಮ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ನಂಬಲಾಗಿದೆ. ಖಟ್ಟರ್ 2014 ರಲ್ಲಿ ಮುಖ್ಯಮಂತ್ರಿಯಾಗುವುದಕ್ಕೆ ಮುಂಚೆ,ಡೇರಾ ಬೆಂಬಲಿಗರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ರಾಮ್ ರಹೀಮ್ ಘೋಷಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಪ್ರಿಯಾಂಕಾ ಗಾಂಧಿ ಆಸ್ಪತ್ರೆಗೆ ದಾಖಲು